ಭದ್ರಾವತಿ, ಅ. ೧೫ : ದಿ ವಾಲ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪುಲ್ ಟೈಮ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ.
೮ ರಿಂದ ೨೫ ವರ್ಷದೊಳಗಿನ ಬಾಲಕ-ಬಾಲಕಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ವರ್ಷಪೂರ್ತಿ ತರಬೇತಿ ನಡೆಯಲಿದ್ದು, ವೃತ್ತಿ ಪರಿಣಿತರಿಂದ ತರಬೇತಿ ನಡೆಯಲಿದೆ. ಮಹಿಳಾ ತರಬೇತಿದಾರರು ಸಹ ಶಿಬಿರದಲ್ಲಿದ್ದು, ಬೆಳವಣಿಗೆಗೆ ಪೂರಕವಾದ ಎಲ್ಲಾ ರೀತಿಯ ತರಬೇತಿ ಸಹ ನಡೆಯಲಿದೆ.
ಅ.೧೬ರಿಂದ ಆರಂಭ :
ಶಿಬಿರವನ್ನು ಅ.೧೬ರಂದು ಬಿ.ಎಲ್ ವೆಂಕಟೇಶ್ ಮತ್ತು ಕೆ.ಎಲ್ ಪ್ರಭು ಉದ್ಘಾಟಿಸಲಿದ್ದು, ವಿಐಎಸ್‌ಎಲ್ ಕ್ರೀಡಾಂಗಣದ ವ್ಯವಸ್ಥಾಪಕ ಮೋಹನ್ ರಾಜ್ ಶೆಟ್ಟಿ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್ ಅರುಣ್, ವಲಯಾಧ್ಯಕ್ಷ ರಾಜೇಂದ್ರ ಕಾಮತ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗೆ ತರಬೇತಿದಾರರಾದ ಎಸ್. ಮುಬಾರಕ್, ಮೊ: ೯೯೦೦೨೬೩೫೨೪ ಅಥವಾ ಎಂ. ವಾಸು, ಮೊ: ೭೪೮೩೫೭೩೬೩೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
No comments:
Post a Comment