ಭದ್ರಾವತಿ, ಅ. ೬: ನಗರದಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಚನ್ನಗಿರಿ ರಸ್ತೆಯಲ್ಲಿ ತೆಂಗಿನ ಮರ ಏಕಾಏಕಿ ಧರೆಗುರುಳಿ ಬಿದ್ದಿದ್ದು, ಆದರೂ ಯಾವುದೇ ಹಾನಿ ಸಂಭವಿಸಿಲ್ಲ.
ತಾಲೂಕು ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಮಂಗೋಟೆ ರುದ್ರೇಶ್‌ರವರ ಮನೆಯ ಕಾಂಪೌಂಡ್‌ನಲ್ಲಿ ಬಾನೆತ್ತರಕ್ಕೆ ಬೆಳೆದಿದ್ದ ತೆಂಗಿನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ತೆಂಗಿನ ಮರ ಧರೆಗುರುಳುವ ವೇಳೆ ರಸ್ತೆಯಲ್ಲಿ ಯಾರು ಸಂಚರಿಸದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.
ತೆಂಗಿನ ಮರ ಧರೆಗುರುಳಿದ ಸ್ಥಳದಲ್ಲಿಯೇ ಒಂದು ಕಾರು ನಿಲ್ಲಿಸಲಾಗಿದ್ದು, ಕಾರಿಗೂ ಸಹ ಯಾವುದೇ ಹಾನಿಯಾಗಿಲ್ಲ. ಆದರೆ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ದುರಸ್ತಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಪೌಂಡ್ ಹಾಗು ಕಬ್ಬಿಣದ ಗೇಟ್ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ.
No comments:
Post a Comment