ಭದ್ರಾವತಿ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ಶನಿವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರವಾಹನ ಸಿಕ್ಕಿ ಹಾಕಿಕೊಂಡಿರುವುದು.
ಭದ್ರಾವತಿ, ನ. ೫ : ರಸ್ತೆ ಅಪಘಾತದಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ನಗರದ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ನಡೆದಿದೆ. ಮೃತಪಟ್ಟ ಗೃಹಿಣಿಯನ್ನು ತಾಲೂಕಿನ ತಾರೀಕಟ್ಟೆ ನಿವಾಸಿ ಪ್ರೀತಿ ಅಲಿಯಾಸ್ ಜ್ಞಾನೇಶ್ವರಿ(೨೬) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ನೋಡಿಕೊಂಡು ಬರಲು ಮೈದುನ ಪ್ರೇಮ್‌ಸಾಗರ್ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರ ವಾಹನ ಸಿಕ್ಕಿ ಹಾಕಿಕೊಂಡಿದ್ದು, ಲಾರಿ ಮೈಮೇಲೆ ಹರಿದ ಪರಿಣಾಮ ಪ್ರೀತಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರೇಮ್‌ಸಾಗರ್ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
No comments:
Post a Comment