ಭದ್ರಾವತಿ, ಫೆ.21: ಉಕ್ಕಿನ ನಗರಕ್ಕೆ ಮಂಗಳವಾರ ಆಗಮಿಸಿದ ಪಂಚರತ್ನ ಯಾತ್ರೆಯಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿಯವರಿಗೆ ಆಭಿಮಾನಿಗಳು, ಕಾರ್ಯಕರ್ತರಿಂದ ವಿಶೇಷ ಹಾರತುರಾಯಿಗಳ ಅದ್ದೂರಿ ಸ್ವಾಗತ ಕಂಡು ಬಂದಿತು.
ನೀರಿನ ಬಾಟಲಿಗಳಿಂದ, ಕಲ್ಲಂಗಡಿ ಹಣ್ಣುಗಳಿಂದ ಹಾಗು ಅಡಕೆ ತಟ್ಟೆಗಳಿಂದ ತಯಾರಿಸಿದ ಬೃಹತ್ ಹಾರಗಳನ್ನು ಕ್ರೇನ್ ಬಳಸಿ ಹಾಕುವ ಮೂಲಕ ಸಂಭ್ರಮಿಸಿದರು.
ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ತಮ್ಮ ಅಳಲನ್ನು ಕುಮಾರ ಸ್ವಾಮಿ ಬಳಿ ತೋರಿಕೊಂಡರು. ಸುಡು ಬಿಸಿಲಿನಲ್ಲೂ ಆಭಿಮಾನಿಗಳು, ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡು ಸಂಜೆವರೆಗೂ ಹೆಜ್ಜೆ ಹಾಕಿದರು.
No comments:
Post a Comment