ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
ಭದ್ರಾವತಿ, ಏ. ೯ : ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ವಿಶೇಷವಾಗಿ ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಅನನ್ಯ ಸೂಪರ್ ಸಂಡೆ ತರಕಾರಿ ಮಾರ್ಕೇಟ್ ರೂಪಿಸಲಾಗಿತ್ತು.
ಶಾಲಾ ಆವರಣದಲ್ಲಿ ರೂಪಿಸಲಾಗಿದ್ದ ಮಾರ್ಕೇಟ್‌ನಲ್ಲಿ ಮಕ್ಕಳು ಬಗೆ ಬಗೆಯ ಸೊಪ್ಪು, ತರಕಾರಿ ಮಾರಾಟದಲ್ಲಿ ತೊಡಗಿದರು. ಎಲೆಕ್ಟ್ರಾನಿಕ್ ಯಂತ್ರ, ತಕ್ಕಡಿ ಬಳಸಿ ತೂಕ ಅಳತೆ ಮಾಡಲಾಯಿತು. ಇದಕ್ಕೂ ಮೊದಲು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ. ನಾಗರಾಜ್ ಮಾರ್ಕೇಟ್ ಉದ್ಘಾಟಿಸಿದರು.
ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಹಾಗು ಶಿಕ್ಷಕ ಮತ್ತು ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.
No comments:
Post a Comment