Wednesday, June 14, 2023

ಜೂ.೨೭ರೊಳಗಾಗಿ ಪಡಿತರ ವಿತರಿಸಲು ಸೂಚನೆ

    ಭದ್ರಾವತಿ, ಜೂ. ೧೪ : ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಜೂನ್-೨೦೨೩ರ ತಿಂಗಳಿನ ಪಡಿತರ ಹಂಚಿಕೆ ಕಾರ್ಯ ೨೭ರೊಳಗಾಗಿ ಮುಕ್ತಾಯಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.
    ಬೆಂಗಳೂರು ಕಛೇರಿಯ ಸುತ್ತೋಲೆ ಪತ್ರದಂತೆ ಜೂ.೨೮ರಿಂದ ಸರ್ವರ್ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪಡಿತರ ಚೀಟಿದಾರರಿಗೆ ಜೂ.೨೭ರೊಳಗಾಗಿ ಈ ತಿಂಗಳ ಆಹಾರ ಧಾನ್ಯ ವಿತರಣೆ/ಹಂಚಿಕೆ ಕಾರ್ಯ ಮುಕ್ತಾಯಗೊಳಿಸುವಂತೆ ಸೂಚಿಸಲಾಗಿದೆ.
    ಪಡಿತರ ಚೀಟಿದಾರರು ಸಹಕರಿಸುವ ಮೂಲಕ ತಮಗೆ ಹಂಚಿಕೆಯಾದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆಯಲು ಸಹಾಯಕ ನಿರ್ದೇಶಕರು ಕೋರಿದ್ದಾರೆ. ಅಲ್ಲದೆ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.


No comments:

Post a Comment