ಭದ್ರಾವತಿಯಲ್ಲಿ ಹಿರಿಯ ಕಾರ್ಮಿಕ ಹೋರಾಟಗಾರ ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಆಚರಿಸಲಾಯಿತು.
ಭದ್ರಾವತಿ, ಜೂ. ೨೦ : ಹಿರಿಯ ಕಾರ್ಮಿಕ ಹೋರಾಟಗಾರ ಕಾಂಮ್ರೇಡ್ ಡಿ.ಸಿ ಮಾಯಣ್ಣನವರ ೮೯ನೇ ಜನ್ಮದಿನಾಚರಣೆ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಡಿ.ಸಿ ಮಾಯಣ್ಣನವರ ಹೋರಾಟ ಇಂದಿನವರಿಗೆ ಪ್ರೇರಣೆಯಾಗಿದೆ. ಹಲವಾರು ಹೋರಾಟಗಳಿಗೆ ಮಾಯಣ್ಣನವರು ಶಕ್ತಿ ತುಂಬಿದ್ದಾರೆ. ಇವರ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಾಗಿದೆ ಎಂದರು.
ಡಿಎಸ್‌ಎಸ್ ಮುಖಂಡರಾದ ವಿಜಯಮ್ಮ ಎನ್ ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಮುಖರಾದ ಎಲ್.ವಿ ರುದ್ರಪ್ಪ, ಸಿದ್ದಲಿಂಗಯ್ಯ, ಟಿ. ವೆಂಕಟೇಶ್, ಫೀರ್‌ಷರೀಪ್, ನರಸಿಂಹಚಾರ್, ಎಂ. ನಾರಾಯಣ, ಯಲ್ಲೋಜಿರಾವ್, ಅನಂತರಾಮು, ಆಂಜನೇಯ, ಚಂದ್ರಶೇಖರ್, ಶಶಿಕುಮಾರ್ ಗೌಡ, ಹಫೀಜ್ ಉರ್ ರಹಮಾನ್, ಟಿ.ಜಿ ಬಸವರಾಜಯ್ಯ, ಉಕ್ಕುಂದ ಶಿವಕುಮಾರ್, ಕಮಲಕರ್, ಜಗದೀಶ್, ಮುತ್ತು, ತಿರುಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment