ಭದ್ರಾವತಿ ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
ಭದ್ರಾವತಿ, ಜು. ೧೮ : ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
ಬಿವಿಐ ಅಧ್ಯಕ್ಷ ಡಿ.ಎ ರಾಕೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲೆಕ್ಟೆಡ್ ಪ್ರೆಸಿಡೆಂಟ್ ಅಮಿತ್ ಗುಜ್ಜರ್‌ರವರ ಪ್ರಾಯೋಜತ್ವದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಗುತ್ತಿದೆ. ಇದೆ ರೀತಿ ಚೈಲ್ಡ್‌ವೆಲ್ಪೇರ್‌ಡೈರೆಕ್ಟರ್‌ಅನಿತಾ ಪ್ರದೀಪ್‌ಗುಜ್ಜರ್‌ಪ್ರಾಯೋಜತ್ವದಲ್ಲಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಭಾನುವಾರ ಇವರ ಪ್ರಾಯೋಜತ್ವದಲ್ಲಿ ಸಿಂಪಲ್‌ಟೆಕ್ನಿಕ್ವೆ ಫಾರ್‌ಲರ್ನಿಂಗ್‌ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ರಾಮ ರಾವ್ , ಆನಂದ್ ಉತ್ತರಕರ, ಅನಿತಾ ಗುಜ್ಜರ್, ರೇಖಾ ಹರೀಶ್ ಸೇರಿದಂತೆ ಬಿವಿಐ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಬಸವಂತ್ ರಾವ್ ದಾಳೆ ವಂದಿಸಿದರು.
No comments:
Post a Comment