ಎಚ್.ಎಸ್ ಬದರಿನಾರಾಯಣ
ಭದ್ರಾವತಿ, ಆ. ೫ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ತಾಲೂಕು ಮುಜರಾಯಿ ಅರ್ಚಕರ ಸಂಘಕ್ಕೆ ಅಧ್ಯಕ್ಷರಾಗಿ ಎಚ್.ಎಸ್ ಬದರಿನಾರಾಯಣ ನೇಮಕ ಗೊಂಡಿದ್ದಾರೆ.
ಒಕ್ಕೂಟದ ರಾಜ್ಯಾಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ೫ ವರ್ಷಗಳ ಅವಧಿಗೆ ಎಚ್.ಎಸ್ ಬದರಿನಾರಾಯಣ ಹಾಗು ಕಾರ್ಯದರ್ಶಿಯಾಗಿ ಎಂ. ಮಂಜುನಾಥ್ ನಾಗತಿ ಬೆಳಗಲು ಅವರನ್ನು ನೇಮಕಾತಿಗೊಳಿಸಿ ಕೇಂದ್ರ ಸಮಿತಿಯ ಎಲ್ಲಾ ಆದೇಶಗಳನ್ನು ಪರಿಪಾಲಿಸಿಕೊಂಡು ಬರುವ ಜೊತೆಗೆ ಸಕಾಲದಲ್ಲಿ ಸಂಘದ ವರದಿಗಳನ್ನು ನೀಡುವಂತೆ ಕೋರಿದ್ದಾರೆ.
ಎಂ. ಮಂಜುನಾಥ್ ನಾಗತಿ ಬೆಳಗಲು
ನೇಮಕಗೊಳ್ಳಲು ಕಾರಣಕರ್ತರಾದ ಒಕ್ಕೂಟದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಮತ್ತು ಒಕ್ಕೂಟದ ಜಿಲ್ಲಾಧ್ಯಕ್ಷ ಮಿಥುನ್ ಅಯ್ಯಂಗಾರ್ ಅವರಿಗೆ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ.
No comments:
Post a Comment