ಶ್ರೀ ರಾಘವೇಂದ್ರ ಗುರು ಸಾರ್ವಭೌಮರು
ಭದ್ರಾವತಿ, ಆ. ೨೮: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯಿಂದ ೩೫೨ನೇ ರಥೋತ್ಸವ ಮತ್ತು ಆರಾಧನಾ ಮಹೋತ್ಸವ ಆ.೩೧ ರಿಂದ ಸೆ.೨ರವರೆಗೆ ೩ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪಾಶೀರ್ವಾದದೊಂದಿಗೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೨ನೇ ಮಹೋತ್ಸವ ಮತ್ತು ಆರೋಧನಾ ಮಹೋತ್ಸವ ಜರುಗಲಿದೆ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ೭ಕ್ಕೆ ಪಂಚಾಮೃತ ಅಭಿಷೇಕ, ೮ಕ್ಕೆ ಭಕ್ತರ ಮನೆಗಳಲ್ಲಿ ಪಾದಪೂಜೆ ಮತ್ತು ೮.೩೦ಕ್ಕೆ ಡೋಲೋತ್ಸವ ನಡೆಯಲಿದೆ.
ಆ.೩೧ರಂದು ಗಾಂಧಿನಗರ, ಕೇಶವಪುರ ಹಾಗು ಹೊಸಮನೆ ಬಡಾವಣೆ ವ್ಯಾಪ್ತಿಯಲ್ಲಿ, ಸೆ.೧ರಂದು ಹಳೇನಗರದ ಬ್ರಾಹ್ಮಣರ ಬೀದಿಯ ಭಕ್ತರ ಮನೆಗಳಲ್ಲಿ ಹಾಗು ೨ರಂದು ಮಠದಲ್ಲಿ ಪಾದಪೂಜೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ಮಠದಲ್ಲಿ ತುಲಾಭಾರ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
No comments:
Post a Comment