Monday, January 1, 2024

ವಿವಿಧ ಸೇವಾ ಕಾರ್ಯಗಳೊಂದಿಗೆ ಶಾರದ ಅಪ್ಪಾಜಿ ಹುಟ್ಟುಹಬ್ಬ ಆಚರಣೆ

ಭದ್ರಾವತಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಧರ್ಮಪತ್ನಿ, ಜಾತ್ಯತೀತ ಜನತಾದಳ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಸೋಮವಾರ ವಿವಿಧ ಸೇವಾ ಕಾರ್ಯಗಳೊಂದಿಗೆ ಅದ್ದೂರಿಯಿಂದ ಆಚರಿಸಲಾಯಿತು.
    ಭದ್ರಾವತಿ; ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಧರ್ಮಪತ್ನಿ, ಜಾತ್ಯತೀತ ಜನತಾದಳ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿಯವರ ಹುಟ್ಟುಹಬ್ಬ ಸೋಮವಾರ ವಿವಿಧ ಸೇವಾ ಕಾರ್ಯಗಳೊಂದಿಗೆ ಅದ್ದೂರಿಯಿಂದ ಆಚರಿಸಲಾಯಿತು.
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ತಾಲೂಕು ಘಟಕದ ವತಿಯಿಂದ ಒಳರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ನಡೆಯಿತು.
ನ್ಯೂಟೌನ್ ಶಾರದ ಅಪ್ಪಾಜಿಯವರ ಮನೆಯ ಆವರಣದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.


    ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ. ಅಭಿಲಾಷ್, ಡಾ. ಮಾಧುರ್ಯ, ಡಾ. ಲಕ್ಷ್ಮಿಪ್ರಿಯ ನೇತೃತ್ವದ ತಂಡ ಶಿಬಿರ ಯಶಸ್ವಿಗೆ ಸಹಕರಿಸಿತು.
    ಪಕ್ಷದ ಪ್ರಮುಖರಾದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ನಗರಸಭೆ ಸದಸ್ಯರಾದ ಉದಯಕುಮಾರ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್‌ಕುಮಾರ್, ಮಾಜಿ ಸದಸ್ಯರಾದ ಎಂ.ಎ ಅಜಿತ್, ಎಂ. ರಾಜು, ವಿಶಾಲಾಕ್ಷಿ,  ಮುಖಂಡರಾದ ಎ.ಟಿ ರವಿ, ಉಮೇಶ್, ಸೈಯದ್ ಅಜ್ಮಲ್, ಚೆನ್ನಿಗಪ್ಪ, ಎಚ್.ಡಿ ನಾಗರಾಜು, ರಾಮಕೃಷ್ಣ, ಎ. ರಾಧಾ, ಭಾಗ್ಯಮ್ಮ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.

No comments:

Post a Comment