ಭದ್ರಾವತಿ : ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ.
ಹೊಸಸೇತುವೆ ಬಳಿ ವೃದ್ಧ ಮಹಿಳೆಯೊಬ್ಬರು ಭದ್ರಾ ನದಿಯಲ್ಲಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಇಆರ್‌ವಿ ಅಧಿಕಾರಿಗಳಾದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಬಿನೇಶ್ ಹಾಗು ಶಿವಮೊಗ್ಗ ಡಿಎಆರ್ ಸಿಬ್ಬಂದಿ ಚಾಲಕ ಶಿವಶರಣರವರು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಯತ್ನಿಸಲು ಕಾರಣ ತಿಳಿದು ಸಮಾಧಾನಪಡಿಸಿ ಕರೆ ತಂದಿದ್ದಾರೆ. ಬಿನೇಶ್ ಹಾಗು ಶಿವಶರಣರವರ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಶಂಸಿಸಿದೆ.
ಭದ್ರಾವತಿ ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ.
No comments:
Post a Comment