ಜೆ.ಎನ್ ಬಸವರಾಜಪ್ಪ
ಭದ್ರಾವತಿ: ನಗರದ ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪನವರೊಂದಿಗೆ `ಸ್ವಚ್ಛತೆ ನಮ್ಮೆಲ್ಲರ ಆದ್ಯತೆ' ಕುರಿತು ಭದ್ರಾವತಿ ಆಕಾಶವಾಣಿ ನಡೆಸಿದ ಸಂದರ್ಶನ ಅ.೨೧ರ ಸೋಮವಾರ ಬೆಳಿಗ್ಗೆ ೭.೧೫ಕ್ಕೆ ಪ್ರಸಾರಗೊಳ್ಳಲಿದೆ.
ಜೆ.ಎನ್ ಬಸವರಾಜಪ್ಪನವರು ನೂರಾರು ಕವನ, ಐತಿಹಾಸಿಕ ಸ್ಥಳಗಳ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಸಾಹಿತಿ ಹಾಗು ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಹಾಗು ಜಿಲ್ಲಾಮಟ್ಟದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ.
ಇವರೊಂದಿಗೆ ಭದ್ರಾವತಿ ಆಕಾಶವಾಣಿ ಕೇಂದ್ರದ ಎಸ್.ಆರ್ ಭಟ್‌ರವರು ನಡೆಸಿರುವ ಸಂದರ್ಶನ ಪ್ರಸಾರಗೊಳ್ಳುತ್ತಿದ್ದು, ಶ್ರೋತೃಗಳು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ.
Good job by Basavarajappa for healthy Bhadravathi 💐💐💐
ReplyDelete