ಬ್ರದರ್ ಟಿ.ಕೆ ಜಾರ್ಜ್
ಭದ್ರಾವತಿ: ನಗರದ ನಿವಾಸಿ, ಹೆಸರಾಂತ ಪ್ರಚಾರಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ.ಕೆ ಜಾರ್ಜ್(೬೯) ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರಿ ಇದ್ದಾರೆ. ಇವರು ಉಸಿರಾಟ ಸಮಸ್ಯೆಯಿಂದ ಕಳೆದ ಸುಮಾರು ೭೭ ದಿನಗಳಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಅ.೧೭ರಂದು ನಡೆಯಲಿದೆ.
ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಾಧ್ಯಕ್ಷರಾದ ಡುಮಿಂಗ್ ಡಯಾಸ್ ರವರಿಂದ ದಿವ್ಯಬಲಿಪೂಜೆ ನಡೆಯಲಿದ್ದು, ಶವಸಂಸ್ಕಾರ ವಿಧಿಗಳನ್ನು ಗುರುಗಳಾದ ಫ್ರಾಂಕ್ಲಿನ್ ಡಿಸೋಜ, ಸ್ಟೀಫನ್ ಕೋಟ್ಟಕ್ಕಲ್, ಡೈಸನ್ ತರಗನ್, ಲ್ಯಾನ್ಸಿ ಡಿಸೋಜ ಮತ್ತು ಸಜೀಶ್ ಮ್ಯಾಥ್ಯೂರವರು ನಡೆಸಿಕೊಡಲಿದ್ದಾರೆ.
ಜಾರ್ಜ್‌ರವರ ನಿಧನಕ್ಕೆ ಅವರ ಸಹೋದರಾದ ಸೇವಿಯರ್ ಟಿ.ವಿ, ಡೇವಿಸ್ ಟಿ.ವಿ, ಜೋಸೆಫ್ ಟಿ.ವಿ ಹಾಗೂ ಸಹೋದರಿ ರೋಸಿ ಡಿಸೋಜ ಮತ್ತು ಕುಟುಂಬ ವರ್ಗದವರು, ವಿವಿಧ ಕ್ರೈಸ್ತ ದೇವಾಲಯಗಳ ಧರ್ಮ ಗುರುಗಳು, ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಬ್ರದರ್ ಟಿ.ಕೆ ಜಾರ್ಜ್ ಪರಿಚಯ:
ಜಾರ್ಜ್ ಅವರು ಸೆಪ್ಟೆಂಬರ್ ೮, ೧೯೫೫ ರಂದು ಹುಬ್ಬಳ್ಳಿಯಲ್ಲಿ ದಿವಂಗತ ಟಿ ಕೆ ವರ್ಗೀಸ್ ಮತ್ತು ದಿವಂಗತ ಬೇಬಿ ಮೇರಿ ಅವರ ಮಗನಾಗಿ ಜನಿಸಿದರು. ಅವರು ೩ ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು ಅವರನ್ನು ಮಲ ತಾಯಿ ತ್ರೇಸಿಯಮ್ಮ ಅವರನ್ನು ಬೆಳೆಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಭದ್ರಾವತಿಯ ಕಾಗದ ನಗರ ಪ್ರೌಡಶಾಲೆಯಲ್ಲಿ ಮುಗಿಸಿ ನಂತರ ಹೆಚ್ಚಿನ ವ್ಯಾಸಂಗವನ್ನು ದಾವಣಗೆರೆಯಲ್ಲಿ ಮಾಡಿದರು ಹಾಗೂ ಅಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ ಅವರು ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ ಅಲ್ಫೋನ್ಸಾರವರನ್ನು ವಿವಾಹವಾದರು ಅವರಿಗೆ ಜಿನ್ನಿ ಎಂಬ ಮಗಳು ಇದ್ದಾಳೆ ನಂತರ ಅವರು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿನುಗುವ ತಾರೆಯಾದರು. ಅಲ್ಲಿ ಅವರು ದಾವಣಗೆರೆ ಜಾರ್ಜ್ ಎಂದು ಚಿರಪರಿಚಿತರಾದರು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ನಕಾರಾತ್ಮಕ ತಿರುವುಗಳನ್ನು ಎದುರಿಸಬೇಕಾಗಿ ಬಂದ ಕಾರಣ, ಅವರು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗಿದ್ದರು.
ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಬ್ರ ಜಾರ್ಜ್ ಮೇ ೮, ೧೯೯೦ ರಂದು ಕೇರಳದ ಪೊಟ್ಟಾದಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರಿಗೆ ಧ್ಯಾನಕೂಟಕ್ಕಾಗಿ ತೆರಳಿದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ದೊರಕಿತು. ಅದರ ಬಳಿಕ ದೇವರ ವಾಕ್ಯವನ್ನು ಸಾರಲು ವಂದನೀಯ ಗುರುಗಳಾದ ಮ್ಯಾಥ್ಯೂ ನಾಯ್ಕಪರಂಬಿಲ್ ರವರೊಂದಿಗೆ ತಮ್ಮ ಆಧ್ಯಾತ್ಮಿಕ ಯಾತ್ರೆ ಪ್ರಾರಂಭಿಸಿ ಅವರು ಜಾರ್ಜ್ ತರಗನ್ ಎಂದು ಕೇರಳದಲ್ಲಿ ಪ್ರಖ್ಯಾತರಾದರು.
ನಂತರ ಅವರು ವಂದನೀಯ ಗುರುಗಳಾದ ಫ್ರಾಂಕ್ಲಿನ್ ಡಿಸೋಜ ರವರೊಂದಿಗೆ ಯೇಸು ಸ್ಪರ್ಷ ಎಂಬ ತಂಡ ರಚಿಸಿ ಗುರುಗಳ ಮಾರ್ಗದರ್ಶನದ ಮೂಲಕ ಕರ್ನಾಟಕದ ಮೂಲೆಮೂಲೆಗಳಲ್ಲಿ ಭೋಧಿಸುವ ಮೂಲಕ ಸಾವಿರಾರು ಧ್ಯಾನಕೂಟಗಳನ್ನು ನಡೆಸಿ ಸಾವಿರಾರು ಜನರನ್ನು ಯೇಸುವಿನ ಪ್ರೀತಿಯಲ್ಲಿ ಬೆಸೆದಿದ್ದಾರೆ ಹಾಗೆ ಅವರು ಕರ್ನಾಟಕದ ಬ್ರದರ್ ಟಿ ಕೆ ಜಾರ್ಜ್ ಎಂದು ಚಿರಪರಿಚಿತರಾದರು.
ಟಿ. ಕೆ. ಜಾರ್ಜ್ ಅವರು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ಅಆಗಳು ಹಾಗೂ ಆಧ್ಯಾತ್ಮಿಕ ಗೀತೆಗಳ ಒP೩ ಗಳನ್ನು ಬಿಡುಗಡೆ ಮಾಡಿದ್ದರು. ಅವರು ಆಧ್ಯಾತ್ಮಿಕ ಡಿವಿಡಿಗಳನ್ನು ತಯಾರಿಸಿದ್ದಾರೆ, ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅದರಲ್ಲಿ ಹರಿಹರದ ಆರೋಗ್ಯ ಮಾತೆ ಕರ್ನಾಟಕದ ಕ್ರೈಸ್ತರ ಬಹು ಪ್ರಖ್ಯಾತ ಚಲನಚಿತ್ರ ಮತ್ತು ಅನೇಕ ಭಾಷೆಗಳಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ.
Rip Brothy💐
ReplyDeleteR i p brother 💔
ReplyDelete