ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ಲಾಟರಿ ಬಹುಮಾನ ಯೋಜನೆ ಹಾಗು ಧಾರ್ಮಿಕ ಆಚರಣೆಗಳನ್ನು ಜ.೧೫ ರಿಂದ ೧೭ರವರೆಗೆ ಹಮ್ಮಿಕೊಳ್ಳಲಾಗಿದೆ.
ಜ.೧೫ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಪೂಜಾ ಕಾರ್ಯಕ್ರಮ ಹಾಗು ಪ್ರಸಾದ ವಿನಿಯೋಗ ಮತ್ತು ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಜ.೧೬ರಂದು ಮಧ್ಯಾಹ್ನ ೧೨ ಗಂಟೆಗೆ ಗೂಳಿಗಳ ಓಟದ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ಬಹುಮಾನ ರು. ೧೫,೦೦೦, ೨ನೇ ಬಹುಮಾನ ರು. ೧೦,೦೦೦ ಮತ್ತು ೩ನೇ ಬಹುಮಾನ ರು. ೭,೦೦೦ ನಿಗದಿಪಡಿಸಲಾಗಿದೆ. ಅಲ್ಲದೆ ಜೈ ಶ್ರೀ ಬಾಯ್ ವತಿಯಿಂದ ವಿಶೇಷ ಬಹುಮಾನ ಮೊದಲ ಬಹುಮಾನ ರೆಫ್ರಿಜರೇಟರ್, ದ್ವಿತೀಯ ಬಹುಮಾನ ಎಲ್‌ಸಿಡಿ ಟಿವಿ ನೀಡಲಾಗುವುದು.
ಜ.೧೭ರಂದು ಸಂಜೆ ೭ ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ನಂತರ ಲಾಟರಿ ಡ್ರಾ ಫಲಿತಾಂಶ ನಡೆಯಲಿದೆ. ಲಾಟರಿ ಬಹುಮಾನ ಯೋಜನೆಯಲ್ಲಿ ಮೊದಲ ಬಹುಮಾನ ಹಿರೋಹೊಂಡ ದ್ವಿಚಕ್ರ ವಾಹನ, ಎರಡನೇ ಬಹುಮಾನ ಡಬಲ್ ಡೋರ್ ಫ್ರೀಜ್, ಮೂರನೇ ಬಹುಮಾನ ವಾಷಿಂಗ್ ಮೆಷಿನ್, ನಾಲ್ಕನೇ ಬಹುಮಾನ ೩೨ ಇಂಚು ಕಲರ್ ಟಿ.ವಿ ಹಾಗು ೫ನೇ ಬಹುಮಾನ ಸಮಾಧಾನಕರ ಬಹುಮಾನ ೫ ಜನರಿಗೆ ಮಿಕ್ಸಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೯೮೮೦೦೦೭೦೩೭ ಅಥವಾ ೭೮೯೨೨೨೫೪೩೬ ಮೊಬೈಲ್ ಸಂಖ್ಯೆಗೆ ಕರೆಮಾಡಬಹುದಾಗಿದೆ.
No comments:
Post a Comment