ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಭದ್ರಾವತಿ : ಚೇತನ ಫೌಂಡೇಷನ್ ಕರ್ನಾಟಕ, ಪವರ್ ಆಫ್ ಯೂತ್ಸ್ ಫೌಂಡೇಷನ್ ಹುಬ್ಬಳಿ ಮತ್ತು ಅಪ್ನಾದೇಶ್ ಫೌಂಡೇಷನ್ ಧಾರವಾಡ ವತಿಯಿಂದ ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಉತ್ತಮ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ವಾರ್ತೆ, ಸುಭಾಷಿತ, ಗಾದೆ, ಒಗಟು, ದಿನಕ್ಕೊಂದು ಪ್ರಶ್ನೆ, ದಿನಕೊಂದು ಪುಸ್ತಕ ಪರಿಚಯ, ಪ್ರಾರ್ಥನೆ ಸಂದರ್ಭ ಕಡ್ಡಾಯವಾಗಿ ಎಲ್ಲಾ ಮಕ್ಕಳನ್ನು ಬಳಸಿಕೊಂಡು ಪ್ರತಿ ವಾರ ರಸಪ್ರಶ್ನೆ ಕಾರ್ಯಕ್ರಮ, ಗುಂಪು ಕಲಿಕೆ, ಸರ್ಕಾರದ ಶಾಲಾ ಯೋಜನೆಗಳ ಸದ್ಬಳಕೆಯಲ್ಲಿ ಕ್ರಿಯಾಶೀಲತೆ, ಪ್ರೇರಣಾ ಕ್ಲಬ್ ಸೇರಿದಂತೆ ವಿವಿಧ ಸಂಘಗಳ ನಿರ್ವಹಣೆ, ಕಂಪ್ಯೂಟರ್ ಕಲಿಕೆ, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ವಿಶೇಷ ತರಗತಿಗಳು, ಶಾಲಾ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ, ಶಾರದಾ ಮೂರ್ತಿ ಪ್ರತಿಷ್ಠಾಪನೆ, ಭೋಜನ ಕೊಠಡಿ ಸುಣ್ಣ ಬಣ್ಣ, ಟೈಲ್ಸ್ ಅಳವಡಿಕೆ, ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕೂಟಗಳಲ್ಲಿ ಬಹುಮಾನ ಹಾಗು ಇಲಾಖೆ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಫೆ.೨೨ರ ಮಧ್ಯಾಹ್ನ ೨.೩೦ಕ್ಕೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಈ ಶಾಲೆಯನ್ನು ಅಭಿನಂದಿಸಿದ್ದಾರೆ.
No comments:
Post a Comment