ಭದ್ರಾವತಿ ನಗರದಲ್ಲಿ ನಿಸ್ವಾರ್ಥತೆಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ಅಸಹಾಯಕ ಅಂಗವಿಕಲ ಕುಟುಂಬದವರಿಗೆ ಸ್ವಾಭಿಮಾನದಿಂದ ಜೀವನ ಸಾಗಿಸಲು ತರಕಾರಿ ಗಾಡಿ ಹಾಗೂ ಅದಕ್ಕೆ ಬೇಕಾದ ಬಂಡವಾಳದ ಜೊತೆಗೆ ಸಹಾಯ ಹಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ.
ಭದ್ರಾವತಿ: ನಗರದಲ್ಲಿ ನಿಸ್ವಾರ್ಥತೆಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ಅಸಹಾಯಕ ಅಂಗವಿಕಲ ಕುಟುಂಬದವರಿಗೆ ಸ್ವಾಭಿಮಾನದಿಂದ ಜೀವನ ಸಾಗಿಸಲು ತರಕಾರಿ ಗಾಡಿ ಹಾಗೂ ಅದಕ್ಕೆ ಬೇಕಾದ ಬಂಡವಾಳದ ಜೊತೆಗೆ ಸಹಾಯ ಹಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ.
ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಗೆದ್ದಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡಿದೆ. ಈ ಮೂಲಕ ಸಾರ್ವಜನಿಕರ ಸಹಕಾರ ಹಾಗು ದಾನಿಗಳ ನೆರವಿನೊಂದಿಗೆ ಮುನ್ನಡೆಯುತ್ತಿದೆ. ಅಸಹಾಯಕ ಅಂಗವಿಕಲ ಕುಟುಂಬ ಫೌಂಡೇಷನ್ ನೀಡಿರುವ ಸಹಾಯ ಹಸ್ತಕ್ಕೆ ಕೃತಜ್ಞತೆ ಸಲ್ಲಿಸಿದೆ.
ಫೌಂಡೇಷನ್ ಸಂಸ್ಥಾಪಕ ಪ್ರಶಾಂತ್, ಅಬ್ದುಲ್ ಖದೀರ್, ತೀರ್ಥೇಶ್, ವಿಕಲಚೇತನ ಇಲಾಖೆಯ ಜಗದೀಶ್, ಸಮಾಜ ಕಲ್ಯಾಣ ಇಲಾಖೆಯ ಶಿವಕುಮಾರ್, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್ ರಾಜ್, ಹಾಗೂ ಹೊಸಮನೆ ಪ್ರದೀಪ್, ರಾಜಶೇಖರ್ ಉಪ್ಪಾರ, ದಾಸರಕಲ್ಲಹಳ್ಳಿ ಡಿಎಸ್‌ಎಸ್ ಮುಖಂಡ ನಾಗರಾಜ್, ಸಚಿನ್ ಭದ್ರಾವತಿ, ದಲಿತ ಹೋರಾಟಗಾರ ಇಂದ್ರೇಶ್, ಮಹಮದ್ ಸಲ್ಮಾನ್, ರಂಗಸ್ವಾಮಿ(ಸ್ವಿಚ್ ಆನ್ ಕಿಂಗ್ ಭದ್ರಾವತಿ ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment