ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ಆಶ್ರಯದಲ್ಲಿ ಮೊದಲ ಬಾರಿಗೆ ನಾಟಕ ಕಲಿಯಲು ಬಯಸುವ ಯುವ ಸಮುದಾಯದವರಿಗೆ ರಂಗಭೂಮಿ ಕಲಾವಿದ, ನಿರ್ದೇಶಕ ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಉಚಿತ ತರಬೇತಿ ನೀಡಲಾಗುವುದು.
ಈಗಾಗಲೇ ಯುವ ಸಮುದಾಯದ ಸಾಕಷ್ಟು ಮಂದಿಗೆ ತರಭೇತಿ ನೀಡಲಾಗಿದ್ದು, ಅಲ್ಲದೆ ತರಬೇತಿ ಪಡೆದವರಿಂದ ಹಲವು ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಸಕ್ತ ಯುವಕ/ಯುವತಿಯರು ರಂಗ ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗೆ ಮೊ: ೭೯೭೫೦೪೨೧೩೦ ಅಥವಾ ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
No comments:
Post a Comment