ಎಂ.ಎನ್ ಶಿವಸ್ವಾಮಿ
ಭದ್ರಾವತಿ : ನಗರದ ನ್ಯೂಟೌನ್ ಠಾಣೆ ಸಹಾಯಕ ಉಪ ನಿರೀಕ್ಷಕ(ಎಎಸ್‌ಐ) ಎಂ.ಎನ್ ಶಿವಸ್ವಾಮಿ ಅವರಿಗೆ ಈ ಬಾರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾನಿರೀಕ್ಷಕರು ಕರ್ನಾಟಕ ರಾಜ್ಯರವರ ೨೦೨೪-೨೫ನೇ ಸಾಲಿನ ಪ್ರಸಂಶನಾ ಪ್ರಶಸ್ತಿ(ಕಮಾಂಡೇಷನ್ ಡಿಸ್ಕ್) ಪದಕ ಲಭಿಸಿದೆ.
ಸುಮಾರು ೨೯ ವರ್ಷಗಳಿಂದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಸ್ವಾಮಿಯವರು ಈ ಹಿಂದೆ ೨೦೧೭ರಲ್ಲಿ ಇಲಾಖೆಯ ಅತ್ಯುನ್ನತ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದರು. ಇದೀಗ ಇವರ ವೃತ್ತಿ ಸೇವಾವಧಿಯಲ್ಲಿನ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕಾನ್‌ಸ್ಟೇಬಲ್ ಹುದ್ದೆಗೆ ಸೇರ್ಪಡೆಗೊಂಡ ಶಿವಸ್ವಾಮಿಯವರು ದಬೇದಾರ್ ಹುದ್ದೆ ಮುಂಬಡ್ತಿ ಹೊಂದಿ ಶಿವಮೊಗ್ಗ ಜಯನಗರ, ತುಂಗಾನಗರ, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿ ಹಾಗು ರಾಜ್ಯ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರುವರೆ ವರ್ಷಗಳ ಹಿಂದೆ ಸಹಾಯಕ ಉಪ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕ್ರಿಕೆಟ್ ಆಟಗಾರ, ತೀರ್ಪುಗಾರ:
ಶಿವಸ್ವಾಮಿಯವರು ಕ್ರಿಕೆಟ್ ಆಟಗಾರರು ಹಾಗು ತೀರ್ಪುಗಾರರಾಗಿದ್ದಾರೆ. ಕಳೆದ ಸುಮಾರು ೨೩ ವರ್ಷಗಳಿಂದ ೨೦೦೨ರಿಂದ ಕ್ರಿಕೆಟ್ ಆಟದ ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ತೀರ್ಪುಗಾರರಾಗಿದ್ದಾರೆ.
ಶಿವಸ್ವಾಮಿಯವರಿಗೆ ಪೊಲೀಸ್ ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
No comments:
Post a Comment