ಭದ್ರಾವತಿ: ಜಮೀನು ವಿವಾದ ಸಂಬಂಧ ವ್ಯಕ್ತಿಯೋರ್ವನ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ೭ ಆರೋಪಿಗಳಿಗೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶಿರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ಮಂಗಳವಾರ ಸಂಜೆ ಜೀವಾವಧಿ ಶಿಕ್ಷಿವಿಧಿಸಿ ತೀರ್ಪು ನೀಡಿದರು.
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭದ್ರಾಪುರದ ನಿವಾಸಿ ಕರಿಯಪ್ಪ ಎಂಬುವರಿಗೆ ಕೂಡ್ಲಿಯ ಸರ್ವೆ ನಂಬರ್ ೧೯೬ರಲ್ಲಿ ಜಮೀನಿದ್ದು, ಜಮೀನಿನ ಸಂಬಂಧ ಕರಿಯಪ್ಪರಿಗೂ ಹಾಗೂ ಆರೋಪಿಗಳ ನಡುವೆ ವಿವಾದ, ಮನಸ್ಥಾಪವಿತ್ತು.
೫ ಮಾರ್ಚ್ ೨೦೨೦ರಂದು ರಾತ್ರಿ ೯.೩೦ರ ಸಮಯದಲ್ಲಿ ಕರಿಯಪ್ಪನ ಮಗ ನಾಗರಾಜ ಹಾಗೂ ಇವರ ಜೊತೆ ಅರುಣ ಎಂಬುವರು ಜಮೀನಿನ ಭತ್ತದಗದ್ದೆಗೆ ನೀರು ಕಟ್ಟಲು ಹೋದಾಗ ಅಲ್ಲಿಗೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿ ಬಡ್ಡಿ ಪರಮೇಶಿ, ಜಗದೀಶ, ರಮೇಶ್, ಗೌತಮ, ಅಭಿಷೇಕ್, ವಿಕ್ರಂ, ಸಂಜಯ್‌ಎಂಬುವವರು ಕಬ್ಬಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ, ಅರುಣನ ಮೇಲೆ ಹಲ್ಲೆ ನಡೆಸಿದ್ದಾರೆ, ಘಟನಾಸ್ಥಳಕ್ಕೆ ಹೋಗಿ ಆರೋಪಿಗಳನ್ನು ತಡೆಯಲು ಯತ್ನಿಸಿದ ಕರಿಯಪ್ಪರ ಮೇಲೆ ಹಾಗೂ ಉಳಿದವರ ಮೇಲೆ ಆರೋಪಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದಾಗಿ ಗಂಭೀರವಗಿ ಗಾಯಗೊಂಡಿದ್ದ ಕರಿಯಪ್ಪರನ್ನು ಶಿವಮೊಗ್ಗ ಮೆಗ್ಹಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಮೃತಪಟ್ಟಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೋಲಿಸರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ. ೩೦೨, ೩೦೭, ೩೨೪, ೩೨೩, ೩೪೧, ೫೦೪, ೧೪೨, ೧೪೭, ೫೦೬ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಸಗಿದ್ದಾರೆಂದು ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರ ಹಾಗೂ ಆರೋಪಿಗಳಪರ ವಕೀಲರ ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ಪೈಕಿ ೪ನೇ ಆರೋಪಿ ಮಂಜಪ್ಪ ಮತ್ತು ೭ನೇ ಆರೋಪಿ ಶರತ್ ಎಂಬುವವರ ಮೇಲಿನ ಆರೋಪ ಸಾಭೀತಾಗದ ಕಾರಣ ಅವರಿಬ್ಬರ ಬಿಡುಗಡೆಗೆ ಆದೇಶಿಸಿ, ಉಳಿದ ಆರೋಪಿಗಳಾದ ಬಡ್ಡಿಪರಮೇಶಿ, ಜಗದೀಶ, ರಮೇಶ, ಗೌತಮ, ಅಭಿಷೇಕ್, ವಿಕ್ರಂ ಮತ್ತು ಸಂಜಯ್ ಅವರುಗಳ ಮೇಲಿನ ಆರೋಪ ಸಾಬೀತಾದ ಕಾರಣ ೭ ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗು ದಂಡ ವಿಧಿಸಿ ಆದೇಶಿಸಿದ್ದಾರೆ.
ಆರೋಪಿಗಳಿಂದ ಹತ್ಯೆಗೊಳಗಾದ ಕರಿಯಪ್ಪನ ಪತ್ನಿ ಗಂಗಮ್ಮರಿಗೆ ೩ ಲಕ್ಷ ಪರಿಹಾರ ಹಾಗು ಆರೋಪಿಗಳಿಂದ ಹಲ್ಲೆಗೊಳಗಾಗಿರುವ ನಾಗರಾಜ, ಅರುಣ, ವೀರಪ್ಪ, ಮನೋಹರ ಮತ್ತು ನಾಗರಾಜ ೫ ಮಂದಿಗೆ ತಲಾ ಒಂದೊಂದು ಲಕ್ಷ ಪರಿಹಾರ ಆರೋಪಿಗಳು ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ರತ್ಮಮ್ಮ ವಾದ ಮಂಡಿಸಿದ್ದರು.
No comments:
Post a Comment