ಭದ್ರಾವತಿ ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಸಂಯೋಜಿತ ಪಿಯು ಕಾಲೇಜು ವತಿಯಿಂದ ಮನೋಲ್ಲಾಸ ಎಜುಕೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೆಸಿಇಟಿ/ಜೆಇಇ/ಎನ್‌ಇಇಟಿ ತರಬೇತಿ ಕಾರ್ಯಾಗಾರ-೨೦೨೫/೨೬ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಫ್ಲವಿನಾ ಜ್ಯೋತಿ ಫರ್ನಾಂಡಿಸ್ ಉದ್ಘಾಟಿಸಿದರು.
ಭದ್ರಾವತಿ : ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಸಂಯೋಜಿತ ಪಿಯು ಕಾಲೇಜು ವತಿಯಿಂದ ಮನೋಲ್ಲಾಸ ಎಜುಕೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೆಸಿಇಟಿ/ಜೆಇಇ/ಎನ್‌ಇಇಟಿ ತರಬೇತಿ ಕಾರ್ಯಾಗಾರ-೨೦೨೫/೨೬ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಫ್ಲವಿನಾ ಜ್ಯೋತಿ ಫರ್ನಾಂಡಿಸ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಎಸ್.ವೈ ನಾಗೇಶ್ ಕೆಸಿಇಟಿ/ಜೆಇಇ/ಎನ್‌ಇಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಸರಿಸಬಹುದಾದ ಸರಳ ವಿಧಾನಗಳ ಕುರಿತು ವಿವರಿಸಿದರು. ಮನೋಲ್ಲಾಸ ಎಜುಕೇಷನ್ ವ್ಯವಸ್ಥಾಪಕ ನಿರ್ದೇಶಕಿ ಚೈತ್ರಾ, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.
ಉಪನ್ಯಾಸಕ ಪುನೀತ್ ಸ್ವಾಗತಿಸಿ, ಉಪನ್ಯಾಸಕಿ ಶಿಲ್ಪಾ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸುವ ಬಡ ಪ್ರತಿಭಾನ್ವಿತ ವಿಜ್ಞಾನ ವಿದ್ಯಾರ್ಥಿಗಳಿಗೆ ಅತ್ಯಂತ ರಿಯಾಯತಿ ದರದಲ್ಲಿ ೨ ವರ್ಷಗಳ ಕಾಲ ಉತ್ತಮ ತರಬೇತಿ, ಕ್ರ್ಯಾಶ್ ಕೋರ್ಸ್ ಹಾಗೂ ಉಚಿತವಾಗಿ ತರಬೇತಿಗೆ ಪೂರಕವಾದ ಪಠ್ಯಪುಸ್ತಕ, ಪರಿಕರಗಳನ್ನು ಕಲ್ಪಿಸಿಕೊಡುವ ಭರವಸೆ ಸಂಸ್ಥೆಯ ನಿರ್ದೇಶಕರು ವ್ಯಕ್ತಪಡಿಸಿದರು. ಹೆಚ್ಚಿನ ಮಾಹಿತಿಗೆ ಮೊ: ೯೬೬೩೮೭೫೩೭೮ ಅಥವಾ ೮೮೮೪೭೧೦೪೮೫ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ