ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಆಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ೨೦ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ನಗರದ ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್‌ನ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭದ್ರಾವತಿ : ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಆಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ೨೦ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್‌ನ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಅಧ್ಯಕ್ಷರಾದ ದೇವರಾಜ್ ನೇತೃತ್ವದಲ್ಲಿ ತರಬೇತಿದಾರರಾದ ಶಬರಿಷ್, ಮನ್ಸೂರ್, ಪ್ರೇಮ್ ಸಾಗರ್, ಪ್ರೇಮ್ ಕುಮಾರ್ ಮತ್ತು ಮನೋಜ್ ಕುಮಾರ್ ಮಾರ್ಗದರ್ಶನದಲ್ಲಿ ಸುಮಾರು ೩೫ ಕ್ರೀಡಾಪಟುಗಳು ಪಂದ್ಯಾವಳಿ ಭಾಗವಹಿಸಿದ್ದಾರೆ.
ಈ ಪೈಕಿ ೧೦ ಮೊದಲ ಬಹುಮಾನ, ೧೫ ದ್ವಿತೀಯ ಬಹುಮಾನ ಮತ್ತು ೫ ತೃತೀಯ ಬಹುಮಾನ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ. ಈ ಕ್ರೀಡಾಪಟುಗಳನ್ನು ಕಿಂಗ್ ಕಿಕ್ ಮೆಟೇರಿಯಲ್ ಆರ್ಟ್ಸ್ ಅಧ್ಯಕ್ಷರು ಮತ್ತು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ