ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್‌ರವರ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ಭದ್ರಾವತಿ: ನಗರದ ಲಯನ್ಸ್ ಕ್ಲಬ್ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಕ್ಲಬ್ ಹಿರಿಯ ಸದಸ್ಯರಾದ ನಾಗರಾಜ್ ಎಂ. ಶೇಟ್ ಗುರುವಾರ ಪದಗ್ರಹಣ ಸ್ವೀಕರಿಸಿದರು.
ನಾಗರಾಜ್ ಎಂ. ಶೇಟ್ ಅವರೊಂದಿಗೆ ಕಾರ್ಯದರ್ಶಿಯಾಗಿ ಜಿ.ಪಿ ದರ್ಶನ್, ಖಜಾಂಚಿಯಾಗಿ ಬಿ. ನಟರಾಜ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ನಿಖಿತಾ ಎನ್. ಶೇಟ್, ಕಾರ್ಯದರ್ಶಿಯಾಗಿ ಎನ್. ನೀತು ಮತ್ತು ಖಜಾಂಚಿ ಜೆ. ಸಿರಿ ಹಾಗು ನಿರ್ದೇಶಕರು ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.
ಕ್ಲಬ್ ೩೧೭ಸಿ ಪಿಡಿಜಿ ಸುರೇಶ್ ಪ್ರಭು ಪದಗ್ರಹಣ ಬೋಧಿಸಿ ಅಭಿನಂದಿಸಿದರು. ೩೧೭ಸಿ ಪಿಡಿಜಿ ಬಿ. ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್ ಮತ್ತು ಖಜಾಂಚಿ ಕೆ.ಜಿ ರಾಜ್ ಕುಮಾರ್‌ರವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್‌ರವರ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
No comments:
Post a Comment