ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಭದ್ರಾವತಿ : ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು.
ತಮ್ಮ ೨೪ ವರ್ಷಗಳ ವೃತ್ತಿ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಪತ್ರಿಕೆ ಜೊತೆ ಮಾತನಾಡಿದ ಆನಂದ್‌ರವರು, ಶ್ರೀನಗರ, ಜಮ್ಮುಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ಐಟಿಐ ವೃತ್ತಿಪರ ಶಿಕ್ಷಣಪಡೆದು ಸೈನ್ಯಕ್ಕೆ ಸೇರ್ಪಡೆಗೊಂಡು ಹವಲ್ದಾರ್‌ವರೆಗೂ ಮುಂಬಡ್ತಿ ಪಡೆದು ನಿವೃತ್ತಿ ಹೊಂದಿದ್ದೇನೆ. ಇತ್ತೀಚಿನ ಸಿಂಧೂರ ಯುದ್ಧದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ. ಸುಮಾರು ೧೫ ವರ್ಷಗಳ ಹಿಂದೆ ವಿವಾಹವಾಗಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ಮೂಲತಃ ಕೃಷಿ ಕುಟುಂಬ ನಮ್ಮದಾಗಿದ್ದು, ಸದ್ಯಕ್ಕೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಆನಂದ್‌ರವರ ಸಹೋದರ ಅಣ್ಣ ಕೆ. ನಿರಂಜನ್‌ರವರು ಮಾತನಾಡಿ, ನನ್ನ ತಮ್ಮ ಸೈನಿಕನಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅದರಲ್ಲೂ ೨೪ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮರಳಿರುವುದು ಸಂಭ್ರಮದ ಸಂಗತಿಯಾಗಿದೆ ಎಂದರು.
ಆನಂದ್‌ರವರು ಜು.೩೧ರಂದು ನಿವೃತ್ತಿ ಹೊಂದಿದ್ದು, ರೈಲಿನಲ್ಲಿ ೩ ದಿನಗಳ ಕಾಲ ಪ್ರಯಾಣ ಬೆಳೆಸಿ ಮನೆಗೆ ಮರಳಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಆನಂದ್‌ರವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸುವ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಆನಂದ್ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಎ. ಕೆಂಪೇಗೌಡ-ಶಾಂತಮ್ಮ ದಂಪತಿ ದ್ವಿತೀಯ ಪುತ್ರರಾಗಿದ್ದಾರೆ. ಸ್ನೇಹಿತರಾದ ರಮೇಶ್, ವಸಂತ, ಸೋಮಶೇಖರ್, ನಿಂಗೇಗೌಡ ಮತ್ತು ಎಸ್ ಎನ್ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ