ಬಿ. ಮಂಜುನಾಥ್
ಭದ್ರಾವತಿ : ಬೆಂಗಳೂರಿನ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಕೇಂದ್ರದ ತರಬೇತಿದಾರ, ಮೂಲತಃ ನಗರದ ಬಿ. ಮಂಜುನಾಥ್(೪೩) ನಿಧನ ಹೊಂದಿದರು.
ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನಗರದ ಬೈಪಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಸಂಜೆ ನೆರವೇರಿತು.
ಮಂಜುನಾಥ್‌ರವರು ಬೆಂಗಳೂರಿನಲ್ಲಿ ಕರಣ್ ಎಚ್.ಆರ್ ಅಕಾಡೆಮಿ ತರಬೇತಿ ಆರಂಭಿಸುವ ಮೂಲಕ ಸಾವಿರಾರು ಮಂದಿ ನಿರುದ್ಯೋಗಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಮಂಜುನಾಥ್ ನಗರದ ವಿದ್ಯಾಮಂದಿರ ಶಾಲೆ ನಿವೃತ್ತ ಶಿಕ್ಷಕ ದಿವಂಗತ ಹುಲಿಗೆಮ್ಮನವರ ಪುತ್ರರಾಗಿದ್ದು, ಅಲ್ಲದೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕ ಶ್ರೀನಿವಾಸ್‌ರವರ ಸಹೋದರ(ತಮ್ಮ)ರಾಗಿದ್ದಾರೆ. ಇವರ ನಿಧನಕ್ಕೆ ಕಾರ್ಮಿಕ ಮುಖಂಡ ಐಸಾಕ್ ಲಿಂಕನ್, ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ