ಭದ್ರಾವತಿ ನಗರದಲ್ಲಿ ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನ ಶುಕ್ರವಾರ ನಗರದ ವಿವಿಧೆಡೆ ಹಲವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಕೆಲವು ಸಂಘಟನೆಗಳಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು. ಎಂ.ಡಿ ಹನೀಫ್, ಸೈಯದ್ ಸಮೀವುಲ್ಲಾ, ರಹೀಮ್, ಚಂದ್ರು, ನಾಸೀರ್, ಮನ್ನು, ಫಾರೂಕ್, ಅನ್ಸರ್, ತನ್ವೀರ್, ಎಂ.ಡಿ ಗೌಸ್, ಹಿದಾಯತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ: ನಗರದಲ್ಲಿ ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನ ಶುಕ್ರವಾರ ನಗರದ ವಿವಿಧೆಡೆ ಹಲವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಹಳೇನಗರದ ಖಾಜಿಮೊಹಲ್ಲಾ, ಅನ್ವರ್‌ಕಾಲೋನಿ, ಸೀಗೆಬಾಗಿ, ಬೊಮ್ಮನಕಟ್ಟೆ, ದೊಣಬಘಟ್ಟ, ಬಾಬಳ್ಳಿ, ಕಾಗೇಕೋಡಮಗ್ಗಿ, ಕೂಲಿಬ್ಲಾಕ್ ಶೆಡ್, ಸಂಜಯ್ ನಗರ, ನೆಹರೂ ನಗರ, ಚಾಮೇಗೌಡ ಏರಿಯಾ ಸೇರಿದಂತೆ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ, ಬಗೆ ಬಗೆಯ ವಿನ್ಯಾಸಗಳೊಂದಿಗೆ, ಹಸಿರು ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿದ್ದವು.
ಬೆಳಿಗ್ಗೆಯೇ ಮಸೀದಿ, ದರ್ಗಾಗಳಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು. ಕೆಲವು ಸಂಘಟನೆಗಳಿಂದ ಬಡವರಿಗೆ, ಅನಾಥರಿಗೆ ದವಸ-ಧ್ಯಾನ, ದಿನಸಿ ಸಾಮಾಗ್ರಿ, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು. ಇನ್ನೂ ಕೆಲವು ಸಂಘಟನೆಗಳಿಂದ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮತ್ತು ನಿರ್ಮಲ ಆಸ್ಪತ್ರೆ ಒಳರೋಗಿಗಳಿಗೆ, ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ, ಬೊಮ್ಮನಕಟ್ಟೆ ಹೋಂ ಆಫ್ ಹೋಂ ಜನಸ್ನೇಹಿ ಸೇವಾಕೇಂದ್ರ ಮತ್ತು ಉಜ್ಜನಿಪುರ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ನಿರಾಶ್ರಿತರು, ಆನಾಥರಿಗೆ ಹಣ್ಣು-ಬ್ರೆಡ್ ವಿತರಿಸಲಾಯಿತು.
ಭದ್ರಾವತಿ ನಗರದಲ್ಲಿ ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನ ಶುಕ್ರವಾರ ವಿವಿಧೆಡೆ ಅದ್ದೂರಿಯಾಗಿ ಆಚರಿಸಲಾಯಿತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ, ಬಗೆ ಬಗೆಯ ವಿನ್ಯಾಸಗಳೊಂದಿಗೆ, ಹಸಿರು ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿದ್ದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ