ಭದ್ರಾವತಿ ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ಜರುಗಿದ ಮಾಡೆಲ್ ಹೌಸಿಂಗ್ ಸೊಸೈಟಿ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷ ಜಿ.ಟಿ ಬಸವರಾಜ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಸಹಕಾರ ಸಂಘದಲ್ಲಿ ಸದಸ್ಯರ ಸಹಕಾರವಿದ್ದರೆ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಎಲ್ಲರ ಸಹಕಾರದ ಹಾದಿಯಲ್ಲಿ ಸಾಗಿರುವ ಆಡಳಿತ ಮಂಡಳಿಯಿಂದ ಲಾಭಾಂಶಗಳಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಡ್ ನೀಡುವುದಾಗಿ ನಗರದ ಮಾಡೆಲ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ಟಿ.ಬಸವರಾಜ್ ಹೇಳಿದರು.
ಅವರು ಹಳೇನಗರದ ಶ್ರೀ ಭಗೀರಥ ಸಮುದಾಯ ಭವನದಲ್ಲಿ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸದಸ್ಯರಿಗೆ ಅ.೧೫ರಿಂದ ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲೂ ಇದೆ ರೀತಿ ಸಹಕಾರ ನೀಡುವಂತೆ ಕೋರಿದರು. ಸಭೆ ಆರಂಭದಲ್ಲಿ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನ ಹೊಂದಿರುವ ಎನ್. ಕೃಷ್ಣಮೂರ್ತಿ ಮತ್ತು ಆಡಳಿತ ಮಂಡಳಿಯ ಟಿ.ಎನ್ ರಮೇಶ್ ಸೇರಿದಂತೆ ಇನ್ನಿತರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿರ್ದೇಶಕ ಎಂ.ಎಸ್ ಸತೀಶ್ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ನರಸಿಂಹಸ್ವಾಮಿ ಲೆಕ್ಕಪತ್ರ ಮಂಡಿಸಿದರು. ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕರಾದ ನರಸಿಂಹಸ್ವಾಮಿ, ವಿಶ್ವನಾಥಕೋಠಿ, ಕೆ.ಎನ್ ಭೈರಪ್ಪಗೌಡ, ಬಿ.ಪಿ ಶಂಕರ್, ಸಣ್ಣಯ್ಯ, ಎಂ. ನಾಗರಾಜ್, ರಮೇಶ್, ಸಿ.ಆರ್ ಶಿವರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ. ಚಾರ್ವಿಕ ಪ್ರಾರ್ಥಿಸಿ, ಬಿ.ಪಿ ಶಂಕರ್ ಸ್ವಾಗತಿಸಿದರು. ಶಂಕರ್ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ