ಭದ್ರಾವತಿ: ನ್ಯಾಷನಲ್ ಅಜಿಟೇಷನ್ ಕಮಿಟಿ(ಎನ್‌ಎಸಿ) ವತಿಯಿಂದ ಅ. ೧೧ ಮತ್ತು ೧೨ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ(ಫ್ರೀಡಂ ಪಾರ್ಕ್)ದಲ್ಲಿ ಇಪಿಎಸ್-೯೫ ಪಿಂಚಣಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಪಿಂಚಣಿ/ಕನಿಷ್ಠ ಪಿಂಚಣಿ ೭,೫೦೦ ರು.ಗಳಿಗೂ ಅಧಿಕ ಹಾಗು ಡಿಎ ಜಾರಿ ಬಗ್ಗೆ ಹಾಗು ದಕ್ಷಿಣ ಭಾರತದ ರಾಜ್ಯಗಳ ಪಿಂಚಣಿದಾರರ ಸಮಾವೇಶ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷರು ಕೋರಿದ್ದಾರೆ.
ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ನ್ಯಾಷನಲ್ ಕಾನ್ಫಿಡ್ರೇಶನ್ ರಿಟೈರೀಸ್ ಸದಸ್ಯರಾಗಿರುವುದರಿಂದ ಭಾಗವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಸಂಬಂಧ ಈಗಾಗಲೇ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಲಾಗಿದ್ದು, ಅದರಂತೆ ಎನ್‌ಎಸಿ ಕರೆ ನೀಡಿರುವ ಹೋರಾಟದಲ್ಲಿ ಭಾಗವಹಿಸುವುದು. ರಾಜ್ಯದ ಇತರೆಡೆ ಹಾಗು ಬೆಂಗಳೂರಿನ ಸುತ್ತಮುತ್ತ ವಾಸಿಸುತ್ತಿರುವ ಸಂಘದ ಸದಸ್ಯರು ಸಹ ಭಾಗವಹಿಸುವುದು.
ನ್ಯಾಷನಲ್ ಅಜಿಟೇಷನ್ ಕಮಿಟಿ(ಎನ್‌ಎಸಿ) ವತಿಯಿಂದ ಹಮ್ಮಿಕೊಳ್ಳಲಾಗಿರುವ ಹೋರಾಟದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರಾದ ಬಿ.ಕೆ ಸಂಗಮೇಶ್ವರ್ ಸಹ ಭಾಗವಹಿಸಿ ಬೆಂಬಲ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಎಂಪಿಎಂ ರಿಟೈರ್ಡ್ ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಆರ್ ಸೋಮಶೇಖರ್ ಮತ್ತು ಕಾರ್ಯದರ್ಶಿ ಕೆ.ಸಿ ಪ್ರೇಮದಾಸ್ ಕೋರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ