![](https://blogger.googleusercontent.com/img/b/R29vZ2xl/AVvXsEjNSsIhhyS81jvaUcKH1QA-lLbpZGKdOjx7YpEc1zaEiV-UhVX4UwWWUtE7ULzX-7aIov9fNjk6paUQWKzxyfB6M6GdNiEqUaX7190illaXjYV3fKndombUqlK8UpfyqjTpQeVvIG75OUE9/w400-h190-rw/D20-BDVT1-724909.jpg)
ಭದ್ರಾವತಿಯಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ತಾಲೂಕು ಶಾಖೆವತಿಯಿಂದ ನ್ಯೂಟೌನ್ ಜೆಟಿಎಸ್ ಶಾಲೆ ಬಳಿ ಇರುವ ಲಯನ್ಸ್ ಶುಗರ್‌ಟೌನ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹಾಗು ಸಮಿತಿ ಸಂಸ್ಥಾಪಕ ಮತ್ತು ದಲಿತ ಮುಖಂಡ ಎಂ. ಶ್ರೀನಿವಾಸನ್‌ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಮಣಿ ಎಎನ್‌ಎಸ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಸೆ. ೨೦: ನಗರದ ವಿವಿಧೆಡೆ ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸೇರಿದಂತೆ ವಿವಿಧ ಗಣ್ಯರ ಸಂತಾಪ ಸೂಚಕ ಭಾನುವಾರ ಜರುಗಿತು.
ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ತಾಲೂಕು ಶಾಖೆವತಿಯಿಂದ ನ್ಯೂಟೌನ್ ಜೆಟಿಎಸ್ ಶಾಲೆ ಬಳಿ ಇರುವ ಲಯನ್ಸ್ ಶುಗರ್‌ಟೌನ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹಾಗು ಸಮಿತಿ ಸಂಸ್ಥಾಪಕ ಮತ್ತು ದಲಿತ ಮುಖಂಡ ಎಂ. ಶ್ರೀನಿವಾಸನ್‌ರವರಿಗೆ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಮಣಿ ಎ.ಎನ್.ಎಸ್, ಗುಣಶೇಖರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಸಮಿತಿ ಪ್ರಮುಖರಾದ ಎಸ್. ರಾಜು, ವಿಜಯ್‌ಕುಮಾರ್, ನಾರಾಯಣಸ್ವಾಮಿ, ಪಳನಿ, ದೊರೆಸ್ವಾಮಿ, ಅಣ್ಣಪ್ಪ, ಪ್ರಶಾಂತ್, ಜಗನ್ನಾಥ, ಮುರುಗನ್, ಶೇಖರ್, ಉದಯ್‌ಕುಮಾರ್, ರಾಜು, ಸುಬ್ರಮಣಿ, ಜಿಲ್ಲಾ ಸಮಿತಿಯ ವೆಂಕಟಚಲ ಹಾಗು ಎನ್. ಶ್ರೀನಿವಾಸ್ ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮಿತಿಯ ಕರುಣನಿಧಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಪಾಲ್ ಪ್ರಸ್ತಾವಿಕ ನುಡಿಗಳನ್ನಾಡಿದರು.
![](https://blogger.googleusercontent.com/img/b/R29vZ2xl/AVvXsEiSukrgp690SX73dId2ylAQtSnuK70uN-BLpVPsfhSctRwWOg8ONSu5ZjEI8_YrYwWeERGDoQO6VvijOItwm6S92bOouUiEahlvBG9tz8TXuvnYIMSC4ClQR7Ty5Z4WnOswBV0uPAa3R-ZG/w400-h239-rw/D20-BDVT2.jpg)
\
ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಸಿದ್ದಾರೂಢ ನಗರದ ನಿವಾಸಿಗಳಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ರಂಗ ದಾಸೋಹಿ ಎಸ್. ಜಿ ಶಂಕರಮೂರ್ತಿ, ನಗರಸಭಾ ಸದಸ್ಯ ಜಿ.ಡಿ ನಟರಾಜ್ ಮತ್ತು ಎಂ.ಪಿ.ಎಂ ನಿವೃತ್ತ ಅಧಿಕಾರಿ ನಂಜಯ್ಯರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಸಿದ್ದಾರೂಢ ನಗರದ ನಿವಾಸಿಗಳಿಂದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ರಂಗ ದಾಸೋಹಿ ಎಸ್. ಜಿ ಶಂಕರಮೂರ್ತಿ, ನಗರಸಭಾ ಸದಸ್ಯ ಜಿ.ಡಿ ನಟರಾಜ್ ಮತ್ತು ಎಂ.ಪಿ.ಎಂ ನಿವೃತ್ತ ಅಧಿಕಾರಿ ನಂಜಯ್ಯರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಿದ್ದರೂಢನಗರದ ಶಾರದಾ ಮಾತೆ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಎಂ.ಜೆ ಅಪ್ಪಾಜಿ ಪುತ್ರ ಎಂ.ಎ ಅಜಿತ್, ನಿವೃತ್ತ ಪ್ರೊಫೆಸರ್ ಭುವನೇಶ್ವರ್, ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಬಸವರಾಜು, ನಗರಸಭೆ ಪೌರಾಯುಕ್ತ ಮನೋಹರ್, ಸದಸ್ಯರಾದ ಶಿವರಾಜ್, ಗುಣಶೇಖರ್, ಕವಿತಾ ಸುರೇಶ್, ಎಚ್. ಮಂಜುನಾಥ್, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.