ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಸ್ನೇಹ ಯುವಕರ ಸಂಘದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಭದ್ರಾವತಿ, ನ. ೩೦: ತಾಲ್ಲೂಕಿನ ಗುಡ್ಡದ ನೇರಲೆಕೆರೆ ಸ್ನೇಹ ಯುವಕರ ಸಂಘದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್ ಮಣಿಶೇಖರ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಕೊಮಾರನಹಳ್ಳಿ ಪಂಚಾಯ್ತಿ ಸದಸ್ಯೆ ಸರಸ್ವತಿ, ಮುಖಂಡರಾದ ಕೃಷ್ಣಪ್ಪ, ರವಿಕುಮಾರ್ , ಗಂಗಾಧರಯ್ಯ, ರಾಮೇಗೌಡ್ರು, ಗೋವಿಂದರಾಜ್, ಸಂಘದ ಸದಸ್ಯರಾದ ಸಂಪತ್ ಕುಮಾರ್, ಗಣೇಶ್,ಗಿರೀಶ್, ಅವಿನಾಶ್,ರವಿ ಆರ್ ಪವನ್, ತಿಮ್ಮೇಗೌಡ, ದೇವಿಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.