ಒಟ್ಟು ೧೧ ಮಂದಿಯಿಂದ ಆಕ್ಷೇಪಣೆ : ಜಿಲ್ಲಾಧಿಕಾರಿಗಳಿಂದ ವಿಲೇವಾರಿ
ಭದ್ರಾವತಿ, ಫೆ. ೫: ಸರ್ಕಾರ ಇಲ್ಲಿನ ನಗರಸಭೆಗೆ ಜ.೨೧ರಂದು ಪ್ರಕಟಿಸಿರುವ ವಾರ್ಡ್ ವಾರು ಕರಡು ಮೀಸಲಾತಿ ಪಟ್ಟಿಗೆ ಶಾಸಕರು ಸಹ ಆಕ್ಷೇಪಣೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಒಟ್ಟು ೧೫ ಆಕ್ಷೇಪಣೆ ಅರ್ಜಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಮುಂದಿನ ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಈ ಪೈಕಿ ೨ ಬಾರಿ ಸಲ್ಲಿಸಿರುವ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡ್‌ಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ನಿಗಡಿಪಡಿರುವ ಹಾಗು ವಾರ್ಡ್ ನಂ.೫ ಮತ್ತು ೩೫ರ ಮೀಸಲಾತಿ ನಿಗದಿಯಲ್ಲಿ ನ್ಯಾಯಾಲಯದ ಆದೇಶ ಪರಿಗಣಿಸದಿರುವ ಸಂಬಂಧ ೨ ಅರ್ಜಿಗಳನ್ನು, ಕೆ.ಬಿ ಗಂಗಾದರ್ ಎಂಬುವರು ವಾರ್ಡ್ ನಂ.೩೫ಕ್ಕೆ ಬಿ.ಸಿ.ಎಂ 'ಬಿ' ವರ್ಗ ಮೀಸಲಾತಿ ನಿಗದಿಪಡಿಸುವ ಸಂಬಂಧ ೨ ಅರ್ಜಿಗಳನ್ನು, ಹೊಸಮನೆಯ ಬಿ.ಜಿ ಸೋಮಶೇಖರಪ್ಪ ಎಂಬುವರು ವಾರ್ಡ್ ನಂ.೧೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಪಡಿಸುವ ಸಂಬಂಧ ಒಂದು ಅರ್ಜಿಯನ್ನು, ಇನ್ನೊಂದು ಅರ್ಜಿಯಲ್ಲಿ ವಾರ್ಡ್ ನಂ.೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ, ಸುಣ್ಣದಹಳ್ಳಿಯ ಎಸ್.ಪಿ ಕಿರಣ್‌ಕುಮಾರ್ ಎಂಬುವರು ವಾರ್ಡ್ ನಂ.೧೮ಕ್ಕೆ ಮೀಸಲಾತಿ ಬದಲಾವಣೆ ಮಾಡುವ ಸಂಬಂಧ ಒಂದು ಅರ್ಜಿಯನ್ನು, ಭದ್ರಾ ಕಾಲೋನಿಯ ಬಿ.ಎಂ ಸುರೇಶ್ ಎಂಬುವರು ವಾರ್ಡ್ ನಂ.೯ಕ್ಕೆ ಮೀಸಲಾತಿ ಬದಲಾವಣೆ ಸಂಬಂಧ ೧ ಅರ್ಜಿಯನ್ನು, ಮೊಹಮ್ಮದ್ ಆಲಿ ಬೇಗ್ ಎಂಬುವರು ವಾರ್ಡ್ ನಂ.೦೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ ೨ ಅರ್ಜಿಯನ್ನು ಹಾಗು ಜೇಡಿಕಟ್ಟೆ ಎಸ್. ವಾಗೀಶ್ ಎಂಬುವರು ವಾರ್ಡ್ ನಂ.೧ಕ್ಕೆ ನಿಗದಿಪಡಿಸಿರುವ ಮಹಿಳಾ ಮೀಸಲಾತಿಯನ್ನು ಬದಲಾಯಿಸಿ ಬಿಸಿಎಂ(ಬಿ) ಮೀಸಲಾತಿ ನಗದಿಪಡಿಸುವ ಸಂಬಂಧ, ಉಜ್ಜನಿಪುರ ನಿವಾಸಿ ನಗರಸಭಾ ಸದಸ್ಯ ಬದರಿನಾರಾಯಣ ವಾರ್ಡ್ ನಂ.೯ರ ಭದ್ರಾ ಕಾಲೋನಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ವಾರ್ಡ್ ನಂ.೨೩ರ ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿಗೆ ಬದಲಾಯಿಸಿಕೊಡುವ ಸಂಬಂಧ ಹೀಗೆ ಮತ್ತಿಬ್ಬರು ಒಟ್ಟು ೧೧ ಮಂದಿ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಟ್ಟು ೧೫ ಆಕ್ಷೇಪಣೆ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳಲಿವೆ ಎನ್ನಲಾಗಿದೆ.