Wednesday, April 14, 2021

ವಿವಿಧೆಡೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನ

ಭದ್ರಾವತಿ, ಏ. ೧೪: ಕೊರೋನಾ ನಡುವೆಯೂ ನಗರದ ವಿವಿಧೆಡೆ ಬುಧವಾರ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನ ಅದ್ದೂರಿಯಾಗಿ ಆಚರಿಸಲಾಯಿತು.
ಮಕ್ಕಳನ್ನು ವಿದ್ಯಾವಂತರನ್ನಾಗಿಸಿ :
    ನಗರದ ರಂಗಪ್ಪವೃತ್ತ ಸಮೀಪ ಜೈಭೀಮಾ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ದಲಿತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದಾಗ ಮಾತ್ರ ಅಂಬೇಡ್ಕರ್‌ರವರ ಆಶಯ ಈಡೇರಿದಂತಾಗುತ್ತದೆ. ಪ್ರತಿಯೊಬ್ಬರು ಅಂಬೇಡ್ಕರ್‌ರವರ  ಆಶಯದಂತೆ ನಡೆದುಕೊಳ್ಳಬೇಕೆಂದರು.


   ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಮಾರುತಿ ಮೆಡಿಕಲ್ ಆನಂದ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ತಾಲೂಕು ಸಂಚಾಲಕ ರಂಗನಾಥ್, ನೌಕರರ ಒಕ್ಕೂಟದ ಸಿ. ಜಯಪ್ಪ, ಎಸ್. ಉಮಾ, ನಗರಸಭೆ ಎನ್. ಗೋವಿಂದ, ನವೀನ್, ಹರೀಶ್, ಮಂಜು, ಶಂಕರ್, ಶಶಿ, ಕಿರಣ್, ನಾಗರಾಜ್, ಮಂಜುನಾಥ್, ಎಂ. ಕೃಷ್ಣ, ಗಂಗಾಧರ್, ಕೇಶವ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  
       ನಿಗರ್ತಿಕರು, ಅಂಗವಿಕಲರಿಗೆ ಉಚಿತ ಕ್ಷೌರ  :
       ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನದ ಅಂಗವಾಗಿ ತಾಲೂಕು ಸವಿತಾ ಸಮಾಜ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್ ವತಿಯಿಂದ ನಿಗರ್ತಿಕರು, ಅಂಗವಿಕಲರಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು.
   ದಾನಿ ಮಾರುತಿ ಮೆಡಿಕಲ್ಸ್ ಆನಂದ್, ತಾಲೂಕು ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ್, ಪ್ರಮುಖರಾದ ಮಹೇಶ್, ಗೋಪಿ, ಕರಾವೇ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಹಾಗು ದಯಾಸಾಗರ್ ಟ್ರಸ್ಟ್‌ನ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


        ಅಂಬೇಡ್ಕರ್ ಭವನ ಮುಂಭಾಗ :
   ನಗರದ ಹೃದಯ ಭಾಗದಲ್ಲಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ಮುಕ್ತಾಯದ ಹಂತದಲ್ಲಿರುವ ಅಂಬೇಡ್ಕರ್ ಭವನದ ಮುಂಭಾಗ ಈ ಬಾರಿ ವಿಶೇಷವಾಗಿ ಅಂಬೇಡ್ಕರ್ ಭವನ ಹೋರಾಟ ಸಮಿತಿ ವತಿಯಿಂದ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.
   ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸುವ ಮೂಲಕ ಸಿಹಿ ಹಂಚಲಾಯಿತು. ಹೋರಾಟ ಸಮಿತಿಯ ಪ್ರಮುಖರಾದ ವಿಜಿಯಮ್ಮ, ಬಿ.ಎನ್ ರಾಜು, ಚಂದ್ರಶೇಖರ್, ಸುಬ್ಬೇಗೌಡ, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



        ಅಖಿಲ ಭಾರತ ವಿದ್ಯಾರ್ಥಿ ಪರಿಷತ್ :
    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಆಕಾಶ್, ಮನು, ಅಖಿಲೇಶ್, ಅಶ್ರಿತ, ಸ್ಪೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

        ಛಲವಾದಿ ಸಮಾಜ(ಪರಿಶಿಷ್ಟ ಜಾತಿ):
    ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ತಾಲೂಕು ಛಲವಾದಿ ಸಮಾಜದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ ಮಹಾದೇವಯ್ಯ, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಲೋಕೇಶ್ ಮಾಳೇನಹಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
 


         ಆಮ್ ಆದ್ಮಿ ಪಾರ್ಟಿ :
    ಆಮ್ ಆದ್ಮಿ ಪಾರ್ಟಿ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು.
     ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ಗೀತಾ, ಬಸವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
  

       ಛಲವಾದಿ ಮಹಾಸಭಾ:
   ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು. ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು.
   ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ಜಯರಾಜ್, ಈ.ಪಿ ಬಸವರಾಜ್, ಜಗದೀಶ್, ಆದಿತ್ಯಶಾಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
      

       ಬಂಜಾರ ಯುವಕರ ಸಂಘ :
    ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಸಿರಿಯೂರು ಗ್ರಾಮದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
  ಸಿರಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಪ್ರಮುಖರಾದ ಶೋಭಾಬಾಯಿ, ಅರುಣ್‌ನಾಯ್ಕ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


       ಬಿಜೆಪಿ ನಗರಸಭೆ ೧೦ನೇ ವಾರ್ಡ್ :
  ಭಾರತೀಯ ಜನತಾ ಪಕ್ಷ ನಗರಸಭೆ ೧೦ನೇ ವಾರ್ಡ್‌ನ ಪ್ರಮುಖರು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನದ ಅಂಗವಾಗಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
     ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಮಲ್ಲೇಶ್, ಸುನಿಲ್ ಗಾಯಕ್‌ವಾಡ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


       ವಿಶ್ವೇಶ್ವರಾಯ ವಿದ್ಯಾಸಂಸ್ಥೆ :
   ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಆಚರಿಸಲಾಯಿತು.
    ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪದನಿಮಿತ್ತ ಅಧ್ಯಕ್ಷ ಎನ್. ಕೃಷ್ಣಪ್ಪ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಪ್ರಾಧ್ಯಾಪಕ ಡಾ. ಧನಂಜಯ, ಎಂ.ಎಸ್ ಬಸವರಾಜ್, ಕೆ. ನಿಂಗಪ್ಪ, ಶಿವಲಿಂಗೇಗೌಡ, ಎ.ಎಚ್ ಶಕುಂತಲಾ, ಎಂ. ಹೇಮಾವತಿ, ಜೆಸಿಂತಾ ಕೆ. ಚೈತ್ರ, ಕವಿತಾ, ಆರ್. ರವಿ, ಶಿಲ್ಪ, ಎನ್. ರೇಣುಕಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟದ ಜಾಗೃತಿ ಸಂಕೇತ : ಡಾ. ಬಿ.ಜಿ ಧನಂಜಯ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯರನ್ನು ಸನ್ಮಾನಿಸಲಾಯಿತು.
   ಭದ್ರಾವತಿ, ಏ. ೧೪: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಾಮಾಜಿಕ ಹೋರಾಟದ ಜಾಗೃತಿ ಸಂಕೇತವಾಗಿದ್ದು, ಅವರ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ತಿಳಿಸಿದರು.
   ಅವರು ಬುಧವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೦ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ದೇಶದಲ್ಲಿ ಚಳುವಳಿಗಳನ್ನು ಹುಟ್ಟು ಹಾಕುವ ಮೂಲಕ ಚಳುವಳಿಗಳಿಗೆ ಒಂದು ರೂಪುರೇಷೆ ಕೊಟ್ಟವರು ಅಂಬೇಡ್ಕರ್. ಅವರು ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಆದರೆ ಇಂದು ಚಳುವಳಿಗಳು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದು ತಿಳಿಯದೆ ಗೊಂದಲದ ಗೂಡಾಗಿ ಪರಿಣಮಿಸುತ್ತಿವೆ. ಚಳುವಳಿಗಳು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
   ಅಂಬೇಡ್ಕರ್‌ರವರು ಮನುಕುಲದ ಮಹಾನ್ ನಾಯಕರಾಗಿದ್ದು, ಅವರ ವಿಚಾರಧಾರೆಗಳು ಅಪರೂಪದಲ್ಲಿ ಅಪರೂಪ. ಶೋಷಣೆ ಮುಕ್ತ, ಸರ್ವ ಸಮಾನತೆ ಸಮಾಜ ನಿರ್ಮಾಣ ಇವರ ಆಶಯವಾಗಿತ್ತು.  ದೇಶದಲ್ಲಿ ಸಾಮಾಜಿಕ ಸಮಾನತೆ ಜೊತೆಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳ ಮೂಲಕ ಉತ್ತಮ ಆಡಳಿತ ವ್ಯವಸ್ಥೆಯ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಇವರ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪೌರಾಯುಕ್ತ ಮಹೋಹರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ತಹಸೀಲ್ದಾರ್ ಗ್ರೇಡ್-೨ ರಂಗಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tuesday, April 13, 2021

ನಗರಸಭೆ ಚುನಾವಣೆ : ೩೫ ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು

ಭದ್ರಾವತಿ, ಏ. ೧೩: ಈ ಬಾರಿ ನಗರಸಭೆ ಚುನಾವಣೆ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮೇಲೆ ಪ್ರಬಲ ಪೈಪೋಟಿ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ೨ ದಿನ ಬಾಕಿ ಇರುವಾಗ ೩೫ ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ.
    ವಾರ್ಡ್ ನಂ.೧ಕ್ಕೆ ಮೀನಾಕ್ಷಿ, ವಾರ್ಡ್ ನಂ.೨ಕ್ಕೆ ಜೆ.ಸಿ ಗೀತಾ, ವಾರ್ಡ್ ನಂ.೩ಕ್ಕೆ ಜಾರ್ಜ್, ವಾರ್ಡ್ ನಂ.೪ಕ್ಕೆ ಎಚ್. ವಿದ್ಯಾ, ವಾರ್ಡ್ ನಂ.೫ಕ್ಕೆ ವೈ. ರೇಣುಕಾ, ವಾರ್ಡ್ ನಂ.೬ಕ್ಕೆ ಶ್ರೇಯಸ್, ವಾರ್ಡ್ ನಂ.೭ಕ್ಕೆ ಬಿ.ಎಂ. ಮಂಜುನಾಥ್, ವಾರ್ಡ್ ನಂ.೮ಕ್ಕೆ ಬಷೀರ್ ಅಹಮದ್, ವಾರ್ಡ್ ನಂ.೯ಕ್ಕೆ ಚನ್ನಪ್ಪ, ವಾರ್ಡ್ ನಂ.೧೦ಕ್ಕೆ ಶಶಿಕಲಾ, ವಾರ್ಡ್ ನಂ.೧೧ಕ್ಕೆ ಮಣಿ ಎ.ಎನ್.ಎಸ್, ವಾರ್ಡ್ ನಂ.೧೨ಕ್ಕೆ ಸುದೀಪ್‌ಕುಮಾರ್, ವಾರ್ಡ್ ನಂ.೧೩ಕ್ಕೆ ಜೆ. ಅನುಸುಧಾ, ವಾರ್ಡ್ ನಂ.೧೪ಕ್ಕೆ ಬಿ.ಟಿ ನಾಗರಾಜ್, ವಾರ್ಡ್ ನಂ.೧೫ಕ್ಕೆ  ವಿ. ಸುಮಾ, ವಾರ್ಡ್ ನಂ.೧೬ಕ್ಕೆ ಪುಟ್ಟೇಗೌಡ, ವಾರ್ಡ್ ನಂ.೧೭ಕ್ಕೆ ಟಿಪ್ಪು ಸುಲ್ತಾನ್ ಷಾಹೆ ಆಲಂ, ವಾರ್ಡ್ ನಂ.೧೮ಕ್ಕೆ ಮಹಮದ್ ಯೂಸೂಫ್, ವಾರ್ಡ್ ನಂ.೧೯ಕ್ಕೆ ಆರ್. ಸುಮಿತ್ರ, ವಾರ್ಡ್ ನಂ.೨೦ಕ್ಕೆ ಎಸ್. ಲಕ್ಷ್ಮೀದೇವಿ, ವಾರ್ಡ್ ೨೧ಕ್ಕೆ ಜೆ. ರಮ್ಯಾ, ವಾರ್ಡ್ ನಂ.೨೨ಕ್ಕೆ ಬಿ.ಕೆ ಮೋಹನ್, ವಾರ್ಡ್ ನಂ.೨೩ ಎಚ್. ಯಶೋಧ ಬಾಯಿ, ವಾರ್ಡ್ ನಂ.೨೪ಕ್ಕೆ ಎಸ್.ಎಂ ಅಬ್ದುಲ್ ಮಜೀದ್, ವಾರ್ಡ್ ನಂ.೨೫ ಆಂಜನಪ್ಪ, ವಾರ್ಡ್ ನಂ.೨೬ಕ್ಕೆ ಬಿ.ಪಿ ಸರ್ವಮಂಗಳ, ವಾರ್ಡ್ ನಂ. ೨೭ಕ್ಕೆ ಎಸ್. ಲಕ್ಷ್ಮೀ, ವಾರ್ಡ್ ನಂ.೨೮ಕ್ಕೆ ಕಾಂತರಾಜ್, ವಾರ್ಡ್ ನಂ.೨೯ಕ್ಕೆ ಕೆ.ಸಿ ಶೃತಿ, ವಾರ್ಡ್ ನಂ.೩೦ಕ್ಕೆ ಸೈಯದ್ ರಿಯಾಜ್, ವಾರ್ಡ್ ನಂ.೩೧ಕ್ಕೆ ವೀಣಾ, ವಾರ್ಡ್ ನಂ.೩೨ಕ್ಕೆ ಎಸ್.ಆರ್ ಲತಾ, ವಾರ್ಡ್ ನಂ.೩೩ಕ್ಕೆ ಬಿ.ವಿ ಕೃಷ್ಣರಾಜ್, ವಾರ್ಡ್ ನಂ.೩೪ಕ್ಕೆ ಕೆ.ಆರ್ ಲತಾ ಮತ್ತು ವಾರ್ಡ್ ನಂ.೩೫ಕ್ಕೆ ಸಿ. ಶೃತಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.





Monday, April 12, 2021

ಕಬಡ್ಡಿ ಪಂದ್ಯಾವಳಿ ಗಲಾಟೆ ಪ್ರಕರಣ : ಶಾಸಕರ ಪುತ್ರನಿಗೆ ಜಾಮೀನು ಮಂಜೂರು

ಭದ್ರಾವತಿ, ಏ. ೧೨: ನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಶಾಸಕರ ಪುತ್ರನಿಗೆ ರಾಜ್ಯ ಉಚ್ಛ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
 ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್‌ನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾ.೬ರಂದು ಬಂಧಿಸಿದ್ದರು. ಈ ಸಂಬಂಧ ನಗರದ ಜೆಎಂಎಫ್‌ಸಿ ಹಾಗು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈ ಹಿನ್ನಲೆಯಲ್ಲಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಘಟನೆ ವಿವರ : ಫೆ.೨೭ ಮತ್ತು ೨೮ರಂದು ಎರಡು ದಿನಗಳ ಕಾಲ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಬಹುಮಾನ ವಿತರಣೆ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಹಲವರ ವಿರುದ್ಧ ದೂರು, ಪ್ರತಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಸವೇಶ್ ವಿರುದ್ಧ ಸೆಕ್ಷನ್ ೩೦೭ರ ಅಡಿಯಲ್ಲಿ ಹಲ್ಲೆ ಹಾಗು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ತಲೆ ಮರೆಸಿಕೊಂಡಿದ್ದ ಬಸವೇಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಪುತ್ರ ಬಸವೇಶ್ ಹಾಗು  ಕುಟುಂಬ ಸದಸ್ಯರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದನ್ನು ವಿರೋಧಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಶಿವಮೊಗ್ಗದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ  ಸರ್ಕಾರದ ವಿರುದ್ಧ ಸಿಡಿದೆದಿದ್ದರು.

ಚಿತ್ರ: ಡಿ೧೨-ಬಿಡಿವಿಟಿ೪
ಬಿ.ಎಸ್ ಬಸವೇಶ್

ನಗರಸಭೆ ಚುನಾವಣೆ : ಬಿ ಫಾರಂ ಇಲ್ಲದೆ ಸಂಗಮೇಶ್ವರ್ ಸಂಬಂಧಿ ಎಚ್. ವಿದ್ಯಾ ನಾಮಪತ್ರ ಸಲ್ಲಿಕೆ

ಭದ್ರಾವತಿ ನಗರಸಭೆ ಚುನಾವಣೆ ೪ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರಂ ಇಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂಬಂಧಿ ಎಚ್. ವಿದ್ಯಾ ಸೋಮವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೨: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ನಾಮಪತ್ರಗಳ ಭರಾಟೆ ಹೆಚ್ಚಾಗಿದ್ದು, ಪ್ರತಿಷ್ಠಿತ ವಾರ್ಡ್‌ಗಳಲ್ಲಿ ಒಂದಾಗಿರುವ ೪ನೇ ವಾರ್ಡ್‌ನಲ್ಲಿ ಪ್ರಮುಖ ರಾಜಕೀಯಗಳು ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿವೆ. ಶುಕ್ರವಾರ ಬಿಜೆಪಿ ಘೋಷಿತ ಅಭ್ಯರ್ಥಿಯಾಗಿರುವ ಅನುಪಮ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್. ವಿದ್ಯಾ ನಾಮಪತ್ರ ಸಲ್ಲಿಸಿದರು.
   ಅಭ್ಯರ್ಥಿಗಳಿಬ್ಬರು ಒಂದೇ ಸಮುದಾಯಕ್ಕೆ  ಸೇರಿದವರಾಗಿದ್ದು, ಅನುಪಮ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್‌ರವರ ಪತ್ನಿಯಾಗಿದ್ದಾರೆ. ವಿದ್ಯಾ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
    ವಿದ್ಯಾ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾವ ಆನಂದಪ್ಪ, ಪತಿ ಹಾಲೇಶ್, ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಜಗನ್ನಾಥ್ ಕುಟುಂಬ ವರ್ಗದವರು, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್, ರವೀಶ್, ಬಸವರಾಜ್, ರಮಾಕಾಂತ, ಕಾಂಗ್ರೆಸ್ ಪಕ್ಷದ ಮುಖಂಡರು, ಸ್ಥಳೀಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಚುನಾವಣಾ ನಿರ್ವಹಣಾ ಸಮಿತಿ ರಚನೆ

ಭದ್ರಾವತಿ, ಏ. ೧೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಕ್ಷೇತ್ರ ಪ್ರಮುಖ್‌ರಾಗಿ ಬಿ.ಕೆ ಶ್ರೀನಾಥ್‌ರನ್ನು ನೇಮಕಗೊಳಿಸಲಾಗಿದೆ.
ಚುನಾವಣಾ ಕಾರ್ಯಾಲಯ ಜವಾಬ್ದಾರಿ ಸಿ. ರಾಘವೇಂದ್ರ, ವಿಲಾಸ್‌ರಾವ್, ಅನುಮತಿಗಳು ವಿಜಯ್‌ರಾಜ್, ಮಾಧ್ಯಮ ಬಿ.ಎಸ್ ಶ್ರೀನಾಥ್, ಪ್ರವಾಸ ಅನುಚರಣೆ ಎಂ.ಎಸ್ ಸುರೇಶಪ್ಪ, ಹೈಟೆಕ್ ಪ್ರಚಾರ ರುದ್ರೇಶ್ ಕೂಡ್ಲಿಗೆರೆ, ವಾಹನ ವ್ಯವಸ್ಥೆ ಬಿ.ಎಸ್ ಕಾಂತರಾಜ್, ಪ್ರಚಾರ ಸಾಮಾಗ್ರಿ ಜೆ. ಮೂರ್ತಿ, ನಾಗರಾಜ್ ರಾವ್ ಅಂಬೋರೆ, ಚುನಾವಣಾ ಕಾರ್ಯ ಲೆಕ್ಕಪತ್ರ ಸಂಪತ್ ರಾಜ್ ಭಾಂಟಿಯಾ, ಅಭಿಯಾನ ಚಂದ್ರು ನರಸೀಪುರ, ಮಹಿಳಾ ಕಾರ್ಯ ಆರ್.ಎಸ್ ಶೋಭಾ, ಸುಲೋಚನಾ ಪ್ರಕಾಶ್, ಅನ್ನಪೂರ್ಣ ಸಾವಂತ್, ಬೂತ್ ಕಾರ್ಯ ಹನುಮಂತ್ ನಾಯ್ಕ್, ಸರಸ್ವತಿ, ಆರ್.ಪಿ ವೆಂಕಟೇಶ್, ಕಾನೂನು ಹಾಗು ಆಯೋಗ ಪ್ರಮುಖ್ ನಾಗರಾಜ್, ಉದಯ್‌ಕುಮಾರ್, ಚನ್ನೇಶ್, ವಿಶೇಷ ಸಂಪರ್ಕ ಎಂ. ಮಂಜುನಾಥ್, ಬಿ.ಜಿ ರಾಮಲಿಂಗಯ್ಯ, ವಿಶ್ವನಾಥರಾವ್, ಟಿ. ವೆಂಕಟೇಶ್, ಕರಿಗೌಡ್ರು ಹಾಗು ಮತದಾರರ ಪಟ್ಟಿ ಎಂ.ಎಸ್ ಸುರೇಶಪ್ಪ ನೇಮಕಗೊಳಿಸಲಾಗಿದೆ.

ನಗರಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ೨ನೇ ಪಟ್ಟಿ ಬಿಡುಗಡೆ

ಭದ್ರಾವತಿ, ಏ. ೧೨: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಕೆಲವು ದಿನಗಳ ಹಿಂದೆ ೨೧ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು. ಇದೀಗ ಉಳಿದ ೧೩ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ.
    ೧೪ ವಾರ್ಡ್‌ಗಳ ಪೈಕಿ ೧ನೇ ವಾರ್ಡ್ ಹೊರತುಪಡಿಸಿ ಉಳಿದ ೧೩ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಹಾಗು ಈ ಹಿಂದಿನ ೨೧ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದ ೨ ವಾರ್ಡ್‌ಗಳ ಅಭ್ಯರ್ಥಿಗಳನ್ನು ಬದಲಿಸಲಾಗಿದೆ.
    ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ಕ್ಕೆ ಶಶಿಕಲಾ ನಾರಾಯಣ, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ಕ್ಕೆ ಆಟೋ ಮೂರ್ತಿ, ಅನ್ವರ್‌ಕಾಲೋನಿ, ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ಕ್ಕೆ ಅಮೀರ್ ಪಾಷಾ, ಭದ್ರಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೯ಕ್ಕೆ ಗಿರೀಶ್, ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ. ೧೩ಕ್ಕೆ ಸುನಿತಾ ಮೋಹನ್, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ಕ್ಕೆ ವಿ. ಕದಿರೇಶ್, ನೆಹರೂ ನಗರ ಒಳಗೊಂಡಿರುವ ವಾರ್ಡ್ ನಂ.೧೭ಕ್ಕೆ ಡಿ.ಎನ್  ರವಿಕುಮಾರ್, ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ. ೨೧ಕ್ಕೆ ಅನೂಷ, ಉಜ್ಜನಿಪುರ ಒಳಗೊಂಡಿರುವ ವಾರ್ಡ್ ನಂ.೨೨ಕ್ಕೆ ಭರತ್, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ. ೨೩ಕ್ಕೆ ಸುಮಾ ರಮೇಶ್. ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್‌ಶೆಡ್ ಒಳಗೊಂಡಿರವ ವಾರ್ಡ್ ನಂ.೨೭ಕ್ಕೆ ಶೈಲಾ ರವಿಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ-ಎನ್‌ಟಿಬಿ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ಕ್ಕೆ ರೂಪಾ ನಾಗರಾಜ್, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ಕ್ಕೆ ಶ್ರೀಧರ ಗೌಡ, ಅಪ್ಪರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ಕ್ಕೆ ಶ್ಯಾಮಲ ಸತ್ಯಣ್ಣ ಹಾಗು ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ಕ್ಕೆ ಲಕ್ಷ್ಮಮ್ಮ ನರಸಿಂಹ ಗೌಡರನ್ನು ಆಯ್ಕೆ ಮಾಡಲಾಗಿದೆ.