ಭದ್ರಾವತಿ, ಆ. ೨೬: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ತಾಲೂಕು ಶಾಖೆ ವತಿಯಿಂದ ಆ.೨೮ರಂದು ಮಧ್ಯಾಹ್ನ ೩.೩೦ಕ್ಕೆ ಕಾಗದನಗರದ ವನಿತಾ ಸಮಾಜದಲ್ಲಿ ಶ್ರಾವಣ ಸಂಭ್ರಮ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾಹಿತ್ಯ ಆಕಾಡೆಮಿ ಸದಸ್ಯೆ ದೀಪ್ತಿಶ್ರೀಹರ್ಷ ಉದ್ಘಾಟಿಸಲಿದ್ದು, ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಎಚ್. ತಿಮ್ಮಪ್ಪ, ಬಿ. ಮಂಜಪ್ಪ, ಎಂ.ಆರ್ ಮಂಜುನಾಥ್, ಬಿ. ಗುರು, ಕೋಡ್ಲುಯಜ್ಞಯ್ಯ ಮತ್ತು ಕಮಲಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕವಿಗಳಾದ ಪಿ.ಕೆ ಸತೀಶ್, ಉಮ್ಮರ್ ಕೋಯಾ, ಪೀಟರ್, ಮಾಯಮ್ಮ, ಎಚ್.ಆರ್ ಸುಧಾ, ನಿಹಾರಿಕ, ಎನ್.ಎಸ್ ಸುಬ್ರಮಣ್ಯ, ಸಿ. ಚೈತ್ರ, ಗುಣ, ಸಿದ್ದೋಜಿರಾವ್, ನರೇಂದ್ರ ಘೋರ್ಪಡೆ, ಪುಟ್ಟರಾಜು, ಎಂ. ಹನುಮಂತಪ್ಪ, ಸೂಫಿಯ ತಬಸ್ಸುಂ, ಬಿ.ಕೆ ನಿತಿನ್, ಜ್ಞಾನೇಶ್, ಶ್ರೀಧರೇಶ್ ಭಾರದ್ವಾಜ್ ಮತ್ತು ಲಕ್ಷ್ಮಿ ಭಾಗವಹಿಸಲಿದ್ದಾರೆ.