ಕರ್ನಾಟಕ ಉತ್ತರ ಸಭಾ ಪ್ರಾಂತ್ಯದ ಕಾರ್ಯದರ್ಶಿ ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ಭದ್ರಾವತಿ ಸಿಎಸ್‌ಐ ಜೂಬ್ಲಿ ದೇವಾಲಯದಲ್ಲಿ ನಡೆದ ದೃಢೀಕರಣ ಆರಾಧನೆಯಲ್ಲಿ ಕೆಎನ್‌ಡಿ ರತ್ನ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಫೆ. ೨೮: ಕರ್ನಾಟಕ ಉತ್ತರ ಸಭಾ ಪ್ರಾಂತ್ಯದ ಕಾರ್ಯದರ್ಶಿ ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ನಗರದ ಸಿಎಸ್‌ಐ ಜೂಬ್ಲಿ ದೇವಾಲಯದಲ್ಲಿ ನಡೆದ ದೃಢೀಕರಣ ಆರಾಧನೆಯಲ್ಲಿ ಕೆಎನ್‌ಡಿ ರತ್ನ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಉತ್ತರ ಸಭಾ ಪ್ರಾಂತ್ಯದಲ್ಲಿ ವಿಜಯ್‌ಕುಮಾರ್ ವಸಂತ್ ದಂಡಿನರವರು ಸಲ್ಲಿಸಿರುವ ಸೇವೆ ಹಾಗು ಅವರ ಸಾಧನೆಯನ್ನು ಗುರುತಿಸಿ ಬಿರುದನ್ನು ನೀಡಿ ಸನ್ಮಾನಿಸಲಾಗಿದೆ.
ಪ್ರಾಂತ್ಯದ ಬಿಷಪ್ ರೈಟ್ ರೇವರೆಂಡ್ ಮಾರ್ಟೀನಿ ಸಿ ಬೋರಗೈ, ವಿಜಯ್ ಕನಕರಾಜನ್, ರೇವರೆಂಡ್‌ಗಳಾದ ಸತ್ಯಬಾಬು ಸ್ಯಾಮುಯಲ್, ಅನಿಲ್ ನಿಲುಗಲ್, ಬಾಬು, ಸ್ಟ್ಯಾಂಲಿ, ಅಬ್ರಹಾಂ ಸಂಕೇಶ್ವರ್, ಗಿಡಿಯೋನ್, ಬೋಬಿರಾಜ್ ಸೇರಿದಂತೆ ಇನ್ನಿತರರು ಸಮ್ಮುಖದಲ್ಲಿ ಸಿಎಸ್‌ಐ ತೆಲುಗು ಜೂಬ್ಲಿ ದೇವಾಲಯದ ಸಭಾ ಪಾಲಕರದ ರೇವರೆಂಡ್ ಎಸ್ತೆರ್ ಅಬ್ರಹಾಂ, ಸಭಾ ಪಾಲನ ಸಮಿತಿಯವರಾದ ಅಂಬದಪುಡಿ ಸುವರ್ಣಮ್ಮ, ಇಟ್ಟೆ ಸಂತೋಷ್ ಕುಮಾರ್, ಪಿಲ್ಲಿ ಇಸ್ರಾಲ್, ಚಾಲ್ತಿರಿ ಡ್ಯಾನಿಯಲ್ ಸೇರಿದಂತೆ ಇನ್ನಿತರರು ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ತೆಲುಗು ಕ್ರಿಶ್ಚಿಯನ್ ಸಮುದಾಯದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.