ಭದ್ರಾವತಿ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಸಮಿತಿ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನ ಪದಾಧಿಕಾರಗಳನ್ನು ನೇಮಿಸಿದ್ದು, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಎನ್. ರಮೇಶ್ ಇಕ್ಕೇರಿ ಹಾಗೂ ನಗರಸಭಾ ಸದಸ್ಯರ ಬಿ.ಕೆ.ಮೋಹನ್ ನೇಮಕಾತಿ ಪತ್ರ ನೀಡಿದರು.
ಭದ್ರಾವತಿ, ಫೆ. ೨೭: ತಾಲೂಕು ಕಾಂಗ್ರೆಸ್ ಗ್ರಾಮಾಂತರ ಸಮಿತಿ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನ ಪದಾಧಿಕಾರಗಳನ್ನು ನೇಮಿಸಿ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಇವರು ಆದೇಶ ಹೊರಡಿಸಿದ್ದಾರೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಶಿಫಾರಸ್ಸಿನ ಮೇರೆಗೆ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ ಲಕ್ಷ್ಮಿನಾರಾಯಣ(ಅಣ್ಣಯ್ಯ) ಹಾಗೂ ಜಿಲ್ಲಾ ಅಧ್ಯಕ್ಷ ಇ.ಎನ್.ರಮೇಶ್ ಇಕ್ಕೇರಿಯವರ ಅನುಮೋದನೆಯೊಂದಿಗೆ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ತಾಲೂಕಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಉಪಾಧ್ಯಕ್ಷರಾಗಿ ಸಿಂಗನಮನೆ ಟಿ.ಡಿ ಶಶಿಕುಮಾರ್, ಕೂಡಿಗ್ಲೆರೆ ಡಿ. ಪ್ರಭಾಕರ್ ಹಾಗೂ ಹಿರಿಯೂರು ಎಚ್.ಕೆ ಕುಮಾರ್ ನೇಮಿಸಲಾಗಿದೆ. ಉಳಿದಂತೆ ಸಂಘಟನಾ ಕಾರ್ಯದಶಿಗಳಾಗಿ ಕೂಡ್ಲಿಗೆರೆ ತಳ್ಳಿಕಟ್ಟೆ ಕುಪ್ಪೇಂದ್ರ, ಆರ್. ಮಂಜುನಾಥ್, ಸಿಂಗನಮನೆ ನಂಜಪ್ಪ, ಗಣೇಶ್ ರಾವ್, ಎಸ್. ಆನಂದ, ವಿ. ಗಿರೀಶ್, ಎಚ್. ಕಿರಣ್, ಕಾರ್ಯದರ್ಶಿಗಳಾಗಿ ಹಿರಿಯೂರು ಎಚ್.ಆರ್ ವರದರಾಜ್, ಸಿಂಗನಮನೆ ಎನ್. ಮಂಜಪ್ಪ, ಪಿ. ನಂಜುಂಡೇಶ್ವರ ರಾವ್, ವಿ. ರೂಪೇಶ್, ಸುಜಾತ, ಖಜಾಂಚಿಯಾಗಿ ಸಿಂಗನಮನೆ ಎನ್.ಶ್ರೀಕಾಂತ್, ಸಹಕಾರ್ಯದರ್ಶಿಗಳಾಗಿ ಕೂಡ್ಲಿಗೆರೆ ಜಡಿಯಪ್ಪ, ರಘು, ನಿತಿನ್ ಗಿರಿ, ಸಿಂಗನಮನೆ ಕೆ. ಸುರೇಶ್, ಹಾಗೂ ಸಂಚಾಲಕರಾಗಿ ಕೂಡ್ಲಿಗೆರೆ ವೀರಪ್ಪನ್, ಸಿಂಗನಮನೆ ಕುಮಾರ್‌ರವರನ್ನು ನೇಮಿಸಲಾಗಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಎನ್. ರಮೇಶ್ ಇಕ್ಕೇರಿ ಹಾಗೂ ನಗರಸಭಾ ಸದಸ್ಯರ ಬಿ.ಕೆ.ಮೋಹನ್ ನೇಮಕಾತಿ ಪತ್ರ ನೀಡಿದರು.
ಮಾಜಿ ಸಚಿವ ಕೆ. ಶಿವಮೂರ್ತಿ, ಲೋಕೇಶ್‌ನಾಯ್ಕ್, ಕೆಪಿಸಿಸಿ ಸದಸ್ಯ ಎಚ್.ಸಿ ದಾಸೇಗೌಡ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎಚ್ ಎಲ್ ಷಡಾಕ್ಷರಿ, ನಗರ ಅಧ್ಯಕ್ಷ ಟಿ. ಚಂದ್ರೇಗೌಡ, ಹಿಂದುಳಿದ ನಗರ ಘಟಕದ ಅಧ್ಯಕ್ಷ ಬಿ. ಗಂಗಾದರ್, ಜಿಲ್ಲಾ ಹಿಂದುಳಿದ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೆಂದ್ರ, ಜಿಲ್ಲಾ ಕಾರ್ಯದರ್ಶಿ ಮಹೇಂದ್ರ, ಉಪಾಧ್ಯಕ್ಷ ಬಿ.ಎಸ್.ಗೋಪಾಲ್(ಗೋಪಿ), ಮಾಜಿ ಅಧ್ಯಕ್ಷರಾದ ತಳ್ಳಿಕಟ್ಟೆ ಪ್ರಕಾಶ್, ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment