![](https://blogger.googleusercontent.com/img/a/AVvXsEhMt7k17SIIlESkSDCeSvHV_59Q8CzHKmswnJ2QQaeI_dimoVd0NLKhqc5bs_xdA1j9Wp-VEGswj2scYurxt-RJX5buhwjBtBxltkWwtzsg2ceosieIMbKhnB4aG41tad1Q1oMHxBdprwDLZYZrnt1cnr1svgr2gRbysrMX7O8JQvElgG0gC1eEanyNXA=w400-h188-rw)
ಭದ್ರಾವತಿ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮಾ. ೧೪: ನಗರದ ಜೆಎಂಎಫ್‌ಸಿ ಕೋರ್ಟ್ ಮುಂಭಾಗದ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ವಕೀಲರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಅಲ್ಲದೆ ಹಿನ್ನಲೆ ಅರಿಯದ ನೂತನ ತಹಸೀಲ್ದಾರ್ ಸಹ ವಕೀಲರ ವಿರುದ್ದ ಆರೋಪಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪಗಳಿಗೆ ವಕೀಲರು ಹಾಜರಾಗದೆ ಪ್ರತಿಭಟನೆ ನಡೆಸಿದರು.
ವಕೀಲರ ಸಂಘ ಕಳೆದ ಸುಮಾರು ೩ ವರ್ಷಗಳಿಂದ ಕೋರ್ಟ್ ಮುಂಭಾಗ ಕಟ್ಟಡಗಳ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದೆ. ಆದರೆ ಶಾಸಕರ ಆದೇಶದಂತೆ ಅಧಿಕಾರಿಗಳು ಕಟ್ಟಡಗಳ ತೆರವು ಮಾಡದೆ ರಸ್ತೆ ಡಾಂಬರೀಕರಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆರೋಪಿಸಿದರು.
ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಯಾರು ಪ್ರಶ್ನಿಸುವುದಿಲ್ಲ ಎಂದು ಮನಗಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ನೆಪದಲ್ಲಿ ಡಾಂಬರೀಕರಣ ಮಾಡಲು ಬಂದಿದ್ದು ಹೇಯಕೃತ್ಯವಾಗಿದೆ. ಅಲ್ಲದೆ ವಕೀಲರ ಮೇಲೆ ದೌರ್ಜಜ್ಯವೆಸಗಲು ಬಂದ ಪುಡಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಘಟನೆಯನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ರಂಗಪ್ಪ ವೃತ್ತದಿಂದ ತಾಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ತಹಸೀಲ್ದಾರ್ ಸ್ಥಳಕ್ಕಾಗಮಿಸಿ ಮಾತನಾಡಿ, ಭಾನುವಾರ ನಾವು ಹಿನ್ನಲೆ ಅರಿಯದೆ ಮಾತನಾಡಿದ್ದು ತಪ್ಪಾಗಿದೆ ವಿಷಾಧಿಸುತ್ತೇನೆಂದು ಹೇಳಿದರು.
ನಂತರ ವಕೀಲರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕಟ್ಟಡ ತೆರವು ಮಾಡದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್, ಉದಯಕುಮಾರ್, ಮಂಜಪ್ಪ, ವಿಮಲಾ, ಹಿರಿಯ ವಕೀಲರಾದ ಬಿ.ಆರ್.ಪ್ರಭುದೇವ್, ಟಿ. ಚಂದ್ರೇಗೌಡ, ವಿ. ವೆಂಕಟೇಶ್, ಎ.ಟಿ ರವಿ, ಉಮಾಪತಿ, ಸಿದ್ದೇಶ್, ಸುಜಾತ, ಆಶಾ, ಕೆ.ಎಸ್.ಸುದೀಂದ್ರ, ಕೂಡ್ಲಿಗೆರೆ ಮಂಜುನಾಥ್ ಸೇರಿದಂತೆ ಇನ್ನಿತರ ವಕೀಲರು ಭಾಗವಹಿಸಿದ್ದರು.