ಕೆ.ಸಿ ವೀರಭದ್ರಪ್ಪ
ಭದ್ರಾವತಿ, ಏ. ೮: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ ೩೧೭ಸಿ ವತಿಯಿಂದ ಏ.೯ರ ಭಾನುವಾರ ವೀರಭದ್ರ ಲಯನ್ಸ್ ಜಿಲ್ಲಾ ಕ್ರೀಡಾಕೂಟ ವಿಐಎಸ್ಎಲ್ ಹಾಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ದಿವಂಗತ ಲಯನ್ಸ್ ಕೆ.ಸಿ ವೀರಭದ್ರಪ್ಪ ಸ್ಮರಣಾರ್ಥ ಕ್ರೀಡಾಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ ೯.೪೫ಕ್ಕೆ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಜಿಲ್ಲಾ ಗವರ್ನರ್ ಲಯನ್ಸ್ ಡಾ. ಎಂ.ಕೆ ಭಟ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಲಿದೆ. ಕ್ರೀಡಾ ಸಂಯೋಜಕರಾಗಿ ಎಲ್. ದೇವರಾಜ್, ಗಿರೀಶ್ ಬಂಡಿಗಡಿ ಮತ್ತು ಎಂ.ಜಿ ರಾಜೀವ್ ಕಾರ್ಯನಿರ್ವಹಿಸಲಿದ್ದಾರೆ.
ವಿಶೇಷ ಮನೋರಂಜನೆ, ಸಮಾಜಮುಖಿ ಕಾರ್ಯಕ್ರಮ ಸಹ ನಡೆಯಲಿದ್ದು, ಜಿಲ್ಲೆಯ ಲಯನ್ಸ್ ಹಾಗು ಲಿಯೋ ಕ್ಲಬ್ ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
ಲಯನ್ಸ್ ಪುರುಷರಿಗೆ ೧೦೦ ಮೀ. ಮತ್ತು ೨೦೦ ಮೀ. ಓಟ, ಗುಂಡು ಎಸೆತ ಹಾಗು ಹಿರಿಯ ಪುರುಷರಿಗೆ ೧೦೦ ಮೀ. ನಡಿಗೆ, ಸಂಗೀತ ಕುರ್ಚಿ, ಗುರಿ ಎಸೆತ, ಲಿಯೋಗಳಿಗೆ ೧೦೦ ಮೀ. ಓಟ, ಷಟಲ್ ರಿಲೇ, ಗುರಿ ಎಸೆತ ಮತ್ತು ಕ್ಲಬ್ಗಳಿಗೆ ಥ್ರೋ ಬಾಲ್(ಮಹಿಳೆಯರಿಗೆ), ವಾಲಿಬಾಲ್(ಪುರುಷರಿಗೆ), ಹಗ್ಗಜಗ್ಗಾಟ(ಮಹಿಳೆಯ ಹಾಗು ಪುರುಷರಿಗೆ), ಪೆನಾಲ್ಟಿ ಶೂಟ್ ಔಟ್(ಪುರುಷರಿಗೆ) ಹಾಗು ೩೦ ಯಾರ್ಡ್ ಕ್ರಿಕೆಟ್ ಆಯೋಜಿಸಲಾಗಿದೆ.
ಲಯನ್ಸ್ ಮಹಿಳೆಯರಿಗೆ ೧೦೦ ಮೀ. ಓಟ, ೨೦೦ ಮೀಟರ್ ಓಟ ಮತ್ತು ಗುಂಡು ಎಸೆತ ಹಾಗು ಹಿರಿಯ ಮಹಿಳೆಯರಿಗೆ ೧೦೦ ಮೀ. ಓಟ, ಸಂಗೀತ ಕುರ್ಚಿ ಹಾಗು ಗುರಿ ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಲಯನ್ಸ್ ಕೆ.ಸಿ ವೀರಭದ್ರಪ್ಪ :
೧೯೮೭ರಿಂದ ಲಯನ್ಸ್ ಕ್ಲಬ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ್ನರ್ ಪ್ರತಿನಿಧಿಯಾಗಿ, ಜಿಎಲ್ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ್ನರ್ ಆಗಿ ಸೇವೆ ಸಲ್ಲಿಸಿದ್ದರು. ನ.೨೫, ೨೦೨೧ರಂದು ನಿಧನ ಹೊಂದಿದರು.