ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ ಎಂಬ ದೂರಿನ ಮಾಹಿತಿ ಮೇರೆಗೆ ಭದ್ರಾವತಿ ನಗರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಪಟಾಕಿ ಅಂಗಡಿ ಮತ್ತು ಗೋದಾಮಿನ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಭದ್ರಾವತಿ, ಜು. 16 : ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ ಎಂಬ ದೂರಿನ ಮಾಹಿತಿ ಮೇರೆಗೆ ನಗರಸಭೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಪಟಾಕಿ ಅಂಗಡಿ ಮತ್ತು ಗೋದಾಮಿನ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಹಸಿರು ಪಟಾಕಿ ಮಾರಾಟ ಮಾಡದೆ ನಿಗದಿಪಡಿಸಿದ ದಾಸ್ತಾನು ಮೀರಿ ಹೆಚ್ಚುವರಿ ಪಟಾಕಿ ದಾಸ್ತಾನು ಮಾಡಲಾಗಿದೆ . ಸ್ಪೋಟಕ ವಸ್ತುಗಳ ಮಾರಾಟದ ನಿಯಮ ಉಲ್ಲಂಘನೆಯಾಗಿದ್ದು, ರಂಗಪ್ಪ ವೃತ್ತ ಸಮೀಪದ ಪಟಾಕಿ ಅಂಗಡಿ ಮತ್ತು ಸಿ.ಎನ್ ರಸ್ತೆ, ಆರ್‌ಎಂಸಿ ಮುಂಭಾಗ ಗೋದಾಮು(ಅಯ್ಯಪ್ಪ ಟ್ರೇಡರ್ಸ್) ಮೇಲೆ ದಾಳಿ ನಡೆಸಲಾಗಿದೆ.
ಮಾಲೀಕರು ೧ ವರ್ಷದ ಅವಧಿಗೆ ಪರವಾನಗಿ ಪಡೆದುಕೊಂಡಿದ್ದು, ವರ್ಷ ಪೂರ್ತಿ ಮಾರಾಟಕ್ಕೆ ಅವಕಾಶವಿದೆ. ದಾಸ್ತಾನು ಕುರಿತು ಮಾಹಿತಿ ಪಡೆದಿದ್ದು, ಹೆಚ್ಚುವರಿ ದಾಸ್ತಾನು ಕುರಿತು ಪರಿಶೀಲಿಸಲಾಗುತ್ತಿದೆ.