ಭದ್ರಾವತಿ ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಮತ್ತು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ, ಜು. ೧೫ : ತಾಲೂಕಿನ ಶ್ರೀ ರಾಮನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಆಯ್ಕೆಯಾಗಿದ್ದಾರೆ.
ಒಟ್ಟು ೧೩ ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ ೧ ಸ್ಥಾನ ಖಾಲಿ ಉಳಿದಿದ್ದು, ೧೨ ನಿರ್ದೇಶಕರಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರಂಜನ ಕೆ. ಗೌಡ ಹಾಗು ಉಪಾಧ್ಯಕ್ಷರಾಗಿ ಕೃಷ್ಣೇಗೌಡ ಅವಿರೋಧವಾಗಿ ಆಯ್ಕಯಾದರು.
ರಾಮನಗರ ನಿವಾಸಿಯಾಗಿರುವ ನಿರಂಜನ ಅವರು ಸಂಘದಲ್ಲಿ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದರು. ಇದೀಗ ೩ನೇ ಅವಧಿಯಲ್ಲಿ ಅಧ್ಯಕ್ಷರಾಗಿದ್ದು, ಇದೆ ರೀತಿ ಕೃಷ್ಣೇಗೌಡ ಸಹ ಈ ಹಿಂದೆ ೨ ಬಾರಿ ನಿರ್ದೇಶಕರಾಗಿದ್ದು, ಇದೀಗ ೩ನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.
ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಪೋಪಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ನಿರಂಜನ್ ಹಾಗು ಉಪಾಧ್ಯಕ್ಷ ಕೃಷ್ಣೇಗೌಡರಿಗೆ ಗ್ರಾಮಸ್ಥರು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಸಂಘಕ್ಕೆ ಸುಮಾರು ೫೦ ವರ್ಷಗಳ ಇತಿಹಾಸವಿದ್ದು, ತಾಲೂಕಿನ ಪ್ರಮುಖ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
No comments:
Post a Comment