Wednesday, March 26, 2025

ಮಲಗಿದ್ದ ವ್ಯಕ್ತಿ ಮೇಲೆ ಕುಸಿದುಬಿದ್ದ ಗೋಡೆ : ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣೆ

ಭದ್ರಾವತಿ ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಭದ್ರಾವತಿ : ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಸುಮಾರು ೩೮ ವರ್ಷದ ಆನಂದ ಸ್ವಾಮಿ ಎಂಬುವರು ಕಾಗದನಗರದ ೭ನೇ ವಾರ್ಡ್‌ನ ಪಾಳುಬಿದ್ದಿದ್ದ ಮನೆಯೊಂದರಲ್ಲಿ ಮಲಗಿದ್ದಾಗ ಸಂಜೆ ೫ ಗಂಟೆ ಸಮಯದಲ್ಲಿ ಏಕಾಏಕಿ ಮನೆಯ ಗೋಡೆ ಕುಸಿದು ಬಿದ್ದಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗ್ನಿಶಾಮಕದಳ ಸಿಬ್ಬಂದಿಗಳು ಧಾವಿಸಿ ಸ್ಥಳೀಯರೊಂದಿಗೆ ಜೆಸಿಬಿ ಯಂತ್ರದ ಮೂಲಕ ಗೋಡೆ ಮಣ್ಣು ತೆರವುಗೊಳಿಸಿ ರಕ್ಷಿಸಿದ್ದಾರೆ. 
    ಅಗ್ನಿಶಾಮಕಠಾಣೆ ಸಹಾಯಕ ಠಾಣಾಧಿಕಾರಿ ಸಿ.ಎಚ್ ಹುಲಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಬು, ಆನಂದ್, ಮಂಜುನಾಥ್, ಸುರೇಶ್, ಶ್ರೀನಿವಾಸ್, ಹರೀಶ್, ಮಹೇಂದ್ರ, ರಾಜಾನಾಯ್ಕ, ವೀರೇಶ್, ಬಾಬಲು ಮಾಣಿಕ ಬಾಯ್ ಮತ್ತು ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಗಮನ ಸೆಳೆದ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ

ಭದ್ರಾವತಿ ಭೂಮಿಕಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ: ಭೂಮಿಕಾ ವೇದಿಕೆ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಶಿವಮೊಗ್ಗದ ವಿದುಷಿ ಸುರೇಖಾ ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತದಲ್ಲಿ ಸ್ತ್ರೀ ಸಂವೇದನೆ ವಿನೂತನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು. 
   ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕಾರ್ಯದರ್ಶಿ ಡಾ. ವೀಣಾಭಟ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಸಾಹಿತ್ಯಾಭಿಮಾನಿಗಳು ಹಾಗು ಆಸಕ್ತರು ಪಾಲ್ಗೊಂಡಿದ್ದರು. 

೩ ತಿಂಗಳಿನಿಂದ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲ, ಸೊಳ್ಳೆ ಹಾವಳಿಯಿಂದ ನಿವಾಸಿಗಳು ತತ್ತರ

ಭದ್ರಾವತಿ ನಗರಸಭೆ ವಾರ್ಡ್ ನಂ.೯ರ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿ ಕಳೆದ ಸುಮಾರು ೩ ತಿಂಗಳಿನಿಂದ ಚರಂಡಿ ಸ್ವಚ್ಛತೆ ಕೈಗೊಳ್ಳದ ಕಾರಣ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. 
    ಭದ್ರಾವತಿ : ನಗರಸಭೆ ವಾರ್ಡ್ ನಂ.೯ರ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿ ಕಳೆದ ಸುಮಾರು ೩ ತಿಂಗಳಿನಿಂದ ಚರಂಡಿ ಸ್ವಚ್ಛತೆ ಕೈಗೊಳ್ಳದ ಕಾರಣ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. 
    ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ವಲ್ಪ ಗ್ರಾಮೀಣ ಭಾಗವಾಗಿರುವ ಭದ್ರಾ ಕಾಲೋನಿಯಲ್ಲಿ ಹೆಚ್ಚಿನ ನಿವಾಸಿಗಳು ವಾಸವಾಗಿದ್ದು, ನಗರಸಭೆ ವತಿಯಿಂದ ಪ್ರತಿದಿನ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕಳೆದ ೩ ತಿಂಗಳಿನಿಂದ ಚರಂಡಿಗಳ ಸ್ವಚ್ಛತೆ ಕೈಗೊಂಡಿಲ್ಲ. ಇದರಿಂದಾಗಿ ಚರಂಡಿಗಳಲ್ಲಿ ಬಾರಿ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದ್ದು, ಅಲ್ಲದೆ ಚರಂಡಿಗಳಲ್ಲಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದೆ. ಇದರಿಂದಾಗಿ ಚರಂಡಿಗಳು ಸೊಳ್ಳೆಗಳಿಗೆ ಆಶ್ರಯ ತಾಣಗಳಾಗಿ ಮಾರ್ಪಾಡಾಗಿವೆ. 
    ದೇವಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅದರಲ್ಲೂ ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಚರಂಡಿ ಸ್ವಚ್ಛತೆ ಕೈಗೊಳ್ಳದಿರುವುದುನಿವಾಸಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ ಸೊಳ್ಳೆಗಳ ಸಂತತಿ ವೇಗವಾಗಿ ಬೆಳೆಯುತ್ತಿದ್ದು, ರೋಗರುಜಿನಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಈಗಾಗಲೇ ಹಲವು ಬಾರಿ ವಾರ್ಡಿನ ನಗರಸಭೆ ಚುನಾಯಿತ ಸದಸ್ಯರಿಗೆ ಹಾಗು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.  ಅಲ್ಲದೆ ತಕ್ಷಣ ಎಲ್ಲಾ ರಸ್ತೆಗಳ ಚರಂಡಿಗಳಲ್ಲಿ ಸ್ವಚ್ಛತೆ ಕೈಗೊಂಡು ಸೊಳ್ಳೆ ಹಾವಳಿಯಿಂದ ರಕ್ಷಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. 

Tuesday, March 25, 2025

ರೌಡಿಶೀಟರ್ ಅಬಿದ್ ಕಾಲಿಗೆ ಗುಂಡು : ಬಂಧನ

ರೌಡಿಶೀಟರ್ ಕಡೇಕಲ್ ಆಬಿದ್
    ಭದ್ರಾವತಿ : ನಗರದ ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ರೌಡಿಶೀಟರ್ ಶಿವಮೊಗ್ಗ ಕಡೇಕಲ್ ನಿವಾಸಿ ಆಬಿದ್(೩೯) ಕಾಲಿಗೆ ಪೇಪರ್‌ಟೌನ್ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. 
    ಪೊಲೀಸರು ಹಿಡಿಯಲು ಹೋದಾಗ ಕಾನ್ಸ್‌ಸ್ಟೇಬಲ್ ಅರುಣ್‌ನನ್ನು ಚಾಕಿವಿನಿಂದ ಇರಿದು ಓಡಿ ಹೋಗಲು ಯತ್ನಿಸಿದಾಗ ಠಾಣೆ ನಿರೀಕ್ಷಕಿ ನಾಗಮ್ಮ ಗುಂಡು ಹಾರಿಸಿದ್ದಾರೆ.  ಶಿವಮೊಗ್ಗ ರೌಡಿಶೀಟರ್ ಯಾಸಿನ್ ಖುರೇಶಿ ಸಹಚರನಾಗಿರುವ ಈತನು ಇತ್ತೀಚೆಗೆ ಕೊಲೆ ಯತ್ನ ಕೇಸಿನಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದನು. ಈತನ ಬಂಧನಕ್ಕೆ ಪೇಪರ್‌ಟೌನ್ ಠಾಣೆ ಪೊಲೀಸರ ತಂಡ ಬಲೆ ಬೀಸಿತ್ತು. 
    ಬೊಮ್ಮನಕಟ್ಟೆ ಹಿರಿಯೂರು ಚಾನಲ್ ಬಳಿ ಈತನನ್ನು ಪತ್ತೆ ಮಾಡಿದ ತಂಡ ಠಾಣೆ ನಿರೀಕ್ಷಕಿ ನಾಗಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈತನನ್ನು ಹಿಡಿದು ಬಂಧಿಸಲು ಮುಂದಾದ ಕಾನ್ಸ್‌ಸ್ಟೇಬಲ್ ಅರುಣ್ ಮತ್ತು ಹನುಮಂತ ಇಬ್ಬರ ಮೇಲೆ ದಾಳಿ ನಡೆಸಿದ್ದು,  ಅರುಣ್  ಮೇಲೆ  ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಿರೀಕ್ಷಕಿ ನಾಗಮ್ಮ ರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. . ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಮೇಲೆ ಕೊಲೆ, ಕೊಲೆ ಯತ್ನ. ರಾಬರಿ ಇನ್ನು ಮುಂತಾದ ೨೦ ಪ್ರಕರಣಗಳಿವೆ.   

ಮಹಾನ್ ನಾಯಕರಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅರ್ಥಪೂರ್ಣವಾಗಿ ಜಯಂತಿ ಆಚರಿಸಿ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗ ಜೀವನ್‌ರಾಂರವರ ಜಯಂತಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್  ಮಾತನಾಡಿದರು. 
     ಭದ್ರಾವತಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೪ನೇ ಮತ್ತು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂರವರ ೧೧೭ನೇ ಜಯಂತಿ ಎಲ್ಲರೂ ಒಗ್ಗಟ್ಟಾಗಿ ಈ ಇಬ್ಬರು ಮಹಾನ್ ನಾಯಕರಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಲು ಮುಂದಾಗಿ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
    ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗ ಜೀವನ್‌ರಾಂರವರ ಜಯಂತಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಎಲ್ಲರೂ ಒಗ್ಗಟ್ಟಾಗಿ ಜಾತ್ಯಾತೀತವಾಗಿ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದರು.  
    ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಉದ್ಘಾಟನೆ ಸಂಬಂಧ ದಲಿತ ಮುಖಂಡರು ಒಮ್ಮತದ ನಿರ್ಧಾರ ಕೈಗೊಳ್ಳುವುದು ಸೂಕ್ತ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಅವರನ್ನು ಉದ್ಘಾಟನೆಗೆ ಆಹ್ವಾನಿಸಬಹುದು. ಈ ಸಂಬಂಧ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ  ಎಂದರು.  
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂರವರ ಜಯಂತಿ ಅಂಗವಾಗಿ ೨ ನೇ ಪೂರ್ವಭಾವಿ ಸಭೆ ಕರೆಯಲಾಗಿದೆ. ಕೆಲ ಅಧಿಕಾರಿಗಳು ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದರು. 
    ಆರಂಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಪರುಸಪ್ಪ ಕುರುಬರ ಕಾರ್ಯಕ್ರಮದ ವಿವರಣೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಧಿಕಾರಿ ಸುರೇಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಸಭೆಯಲ್ಲಿ ಬಿ.ಟಿ.ನಾಗರಾಜ್, ಉಮಾ, ಶಿವಬಸಪ್ಪ, ಬಿ.ಎನ್.ರಾಜು, ಪ್ರಜಾಪ್ರತಿನಿಧಿ ಸುರೇಶ್, ಮುತ್ತು, ಪುಟ್ಟರಾಜು, ರಂಗನಾಥ್, ವಿನೋದ್, ಮಂಜುನಾಥ್, ರಾಜು, ಹೊಳೆಹೊನ್ನೂರು ಭಾಗದ ದಲಿತ ಮುಖಂಡರಾದ ಸುರೇಶ್, ಕೃಷ್ಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಡಿ.ಕೆ ಶಿವಕುಮಾರ್ ಹೇಳಿಕೆಯಿಂದ ಅಂಬೇಡ್ಕರ್, ಹಿಂದು-ದಲಿತರಿಗೆ ಅವಮಾನ

ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಧರ್ಮದವರಿಗೆ ಶೇ.೪ರಷ್ಟು ಮೀಸಲಾತಿ ನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಹೇಳಿರುವ ಹಾಗೆ ಸಂವಿಧಾನ ಬದಲಾಯಿಸುವ ಅವಶ್ಯಕತೆ ಬಂದರೆ ಸಂವಿಧಾನವನ್ನೂ ಸಹ ಬದಲಾಯಿಸುತ್ತೇವೆ. ಕಾಂಗ್ರೆಸ್ ಸರ್ಕಾರವೇ ಸಂವಿಧಾನ ಜಾರಿಗೆ ತಂದದ್ದು ಎಂಬ ಹೇಳಿಕೆ ಮೂಲಕ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಹಿಂದುಗಳಿಗೆ ಹಾಗು ದಲಿತರಿಗೆ ಅವಮಾನಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಆರೋಪಿಸಿದರು. 
    ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದರು. 
    ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಧರ್ಮದವರಿಗೆ ಪಾಕಿಸ್ತಾನ ಬಿಟ್ಟುಕೊಡುವ ಜೊತೆಗೆ ಅವರಿಗಾಗಿ ದೇಶದಲ್ಲಿ ವಿಶೇಷ ಸ್ಥಾನಮಾನ ಸಹ ನೀಡಲಾಗಿದೆ. ಆದರೂ ಸಹ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಎಲ್ಲಾ ವಿಷಯದಲ್ಲೂ ತಾರತಮ್ಯ ಮಾಡುವ ಮೂಲಕ ಹಿಂದುಗಳನ್ನು ದಮನ ಮಾಡುವ ಪ್ರಜಾಪ್ರಭುತ್ವ ವಿರೋಧಿ ನಿಲುವು, ಧೋರಣೆ ಅನುಸರಿಸಲಾಗುತ್ತಿದೆ. ಸಂವಿಧಾನ ದೇಶದ ರಕ್ಷಣೆಗಾಗಿ ಇದ್ದು, ಆದರೆ ಅದನ್ನು ಆಟಿಕೆಯಂತೆ ವೋಟ್ ಬ್ಯಾಂಕ್‌ಗಾಗಿ ಮುಸ್ಲಿಂ ಧರ್ಮದವರ ಓಲೈಕೆಗಾಗಿ ಪ್ರತಿ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
    ಹಿಂದೂ ವಿರೋಧಿ ನೀತಿ ತಾಳುತ್ತಿರುವ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಹುಲ್‌ಗಾಂಧಿ ಅವರಿಗೆ ಸಂವಿಧಾನದ ಮೇಲೆ ಸ್ವಲ್ಪವಾದರೂ ಗೌರವವಿದ್ದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದರು. 
ಪ್ರ    ತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಹನುಮಂತ ನಾಯ್ಕ, ಸರಸ್ವತಿ, ಧನುಷ್ ಬೋಸ್ಲೆ, ರಾಜಶೇಖರ್ ಉಪ್ಪಾರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಸತೀಶ್, ರಘುರಾವ್, ನಿರಂಜನ್ ಗೌಡ, ಪ್ರಸನ್ನಕುಮಾರ್, ಜಿ.ವಿ ಕುಮಾರ್, ಶಿವಮೂರ್ತಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನ ಪ್ರಕಾಶ್,ನಂಜಪ್ಪ, ಆಟೋ ಮೂರ್ತಿ ಸೇರಿದಂತೆ  ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಜಾನಪದ ಕಲಾವಿದ, ಶಿಕ್ಷಕ ಎಂ.ಆರ್ ರೇವಣಪ್ಪರಿಗೆ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ

ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ಭದ್ರಾವತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಭದ್ರಾವತಿ : ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಕನ್ನಡ ಫಿಲಂ ಚೇಂಬರ್ ವತಿಯಿಂದ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗು ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಸರಳತೆಯ ಶಿಖರ, ಕರ್ನಾಟಕ ರತ್ನ, ನಗು ಮುಖದ ಪರಮಾತ್ಮ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಪೂರ್ತಿಯೊಂದಿಗೆ ರಾಜ್ಯಮಟ್ಟದ ಪ್ರಶಸ್ತಿನೀಡಿ ಗೌರವಿಸಲಾಗುತ್ತಿದೆ. 
    ಎಂ.ಆರ್ ರೇವಣಪ್ಪರವರು ಮೂಲತಃ ಶಿಕ್ಷಕರಾಗಿದ್ದು, ವೃತ್ತಿಯೊಂದಿಗೆ ಜಾನಪದ ಅಂತರರಾಷ್ಟ್ರೀಯ ಡೊಳ್ಳು ನೃತ್ಯ ಕಲಾವಿದರು ಹಾಗು ಸುಗ್ಗಿ ಕುಣಿತ ಕೋಲಾಟ ಕಲಾವಿದರಾಗಿದ್ದಾರೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಅಂತರರಾಷ್ಟ್ರೀಯ ಹಾಗು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. 
    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾ.೨೩ರಂz ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರೇವಣಪ್ಪರವರು `ಜನಪದ ಕಲಾ ಸೇವಾರತ್ನ' ಪ್ರಶಸ್ತಿ  ಸ್ವೀಕರಿಸಿದರು. ರೇವಣಪ್ಪ ಅವರನ್ನು ನಗರದ ಜನಪ್ರತಿನಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.