ಭದ್ರಾವತಿ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು.
ಭದ್ರಾವತಿ : ಇಲ್ಲಿನ ಗಾಂಧಿನಗರದ ವೆಲಾಂಗಣಿ ಆರೋಗ್ಯ ಮಾತೆ ದೇವಾಲಯದ ೪೧ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರು ಮಾತೆಯ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು.
ಬ್ಯಾಂಡ್‌ಸೆಟ್ ತಂಡದೊಂದಿಗೆ ದೇವಾಲಯದ ಆವರಣಕ್ಕೆ ಮಾತೆಯ ಧ್ವಜವನ್ನು ಮೆರವಣಿಗೆ ಮೂಲಕ ತರಲಾಯಿತು. ದೇವಾಲಯದ ಮುಖ್ಯದ್ವಾರದ ಮುಂಭಾಗ ನೂತನವಾಗಿ ಧ್ವಜಸ್ಥಂಭ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಕಾರ್ಯವನ್ನು ಸಹ ನೆರವೇರಿಸಲಾಯಿತು.
ಸೆ.೮ ರಂದು ನಡೆಯಲಿರುವ ಮಾತೆಯ ಮಹೋತ್ಸವದ ಅಂಗವಾಗಿ ೯ ದಿನಗಳು ಧಾರ್ಮಿಕ ಆಚರಣೆಗಳು ನಡೆಯಲಿದ್ದು, ದೇವಾಲಯವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿದೆ.
ದೇವಾಲಯದ ಧರ್ಮಗುರು ಫಾದರ್ ಸ್ಟೀವನ್ ಡೇಸಾ, ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್, ಫಾದರ್ ಸಂತೋಷ್ ಪೆರೇರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ಸುತ್ತಮುತ್ತಲ ಧರ್ಮ ಕೇಂದ್ರದ ಗುರುಗಳು, ಧರ್ಮಭಗಿನಿಯರು, ಗಾಯನ ಮಂಡಳಿ ಹಾಗೂ ಧರ್ಮ ಕೇಂದ್ರದ ಭಕ್ತರು ಉಪಸ್ಥಿತರಿದ್ದರು.