![](https://blogger.googleusercontent.com/img/a/AVvXsEh3LQ-dLAwe5L-coFJy9-8H8Opz3ot1ljs_aQ3MmiwcWa-yyRU4Nn9dM_tM0PsAL8KH3XLzxOCHMQrJTnVw9gUGxm2rLoklmIkpCOAic12Qj7jD60J8lkir4O0X3MOScmCOxLj7tuBtb2vixLO5lU7jEX2VxsWHXlgGl3gHLxi8FlLCNknMLJgDtTrTqg=w400-h181-rw)
ಭದ್ರಾವತಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಶಂಕರಚಾರ್ಯರ ಜಯಂತ್ಯೋತ್ಸವ ಸರಳವಾಗಿ ನಡೆಯಿತು.
ಭದ್ರಾವತಿ, ಮೇ. ೬: ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಶುಕ್ರವಾರ ಆದಿ ಶಂಕರಚಾರ್ಯರ ಜಯಂತ್ಯೋತ್ಸವ ನಡೆಯಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಜಯಂತ್ಯೋತ್ಸವ ಸರಳವಾಗಿ ನಡೆಯಿತು.
ಆದಿ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ತಾಲೂಕು ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ ಕೃಷ್ಣ ಸೋಮಯಾಜಿಯವರು ಉಪನ್ಯಾಸ ನಡೆಸಿಕೊಟ್ಟರು.
ಉಪತಹಸೀಲ್ದಾರ್ ಮಂಜಾನಾಯ್ಕ, ಶಿರಸ್ತೇದಾರ್ ರಾಧಾಕೃಷ್ಣ ಭಟ್, ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ನರಸಿಂಹಚಾರ್, ರಮಾಕಾಂತ್, ಅರ್ಚಕರಾದ ಮುರಳಿ ಭಟ್, ನಾಗರಾಜ್ ಭಟ್ ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಜಯಂತ್ಯೋತ್ಸವ :
ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತಿ ಅಂಗವಾಗಿ ಉತ್ಸವ ಮೆರವಣಿಗೆ ನಡೆಸಲಾಯಿತು.
ಜಯಂತ್ಯೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಶತರುದ್ರಾಭಿಷೇಕ ಹಾಗು ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ಉತ್ಸವ ಮೆರವಣಿಗೆ ಜರುಗಿತು. ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ನೆರವೇರಿತು.
ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಆನಂದ್ ರಾವ್, ರಾಮರಾವ್, ಮಧು, ನಾಗರಾಜ್, ಮಂಜುನಾಥ್‌ರಾವ್, ಸುರೇಶ್‌ರಾವ್, ಶೇಷಾಚಲ, ಕೃಷ್ಣಮೂರ್ತಿ, ಗೋಪಾಲ್ ಜೋಯಿಸ್, ರಮಾಕಾಂತ್, ಪ್ರಧಾನ ಅರ್ಚಕ ಚಂದನ್ ಜೋಯ್ಸ್, ರಂಗನಾಥ್, ಲಲಿತಾ ಮಹಿಳಾ ಮಂಡಳಿಯ ಮಹಿಳೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸಿದ್ದರೂಢನಗರದ ಶೃಂಗೇರಿ ಶಂಕರ ಮಠದಲ್ಲಿ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ನೇತೃತ್ವದಲ್ಲಿ, ನ್ಯೂಟೌನ್ ದತ್ತಮಂದಿರದಲ್ಲಿ ಹಾಗು ಜನ್ನಾಪರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಸೋಮಯಾಜಿಯವರ ನೇತೃತ್ವದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತ್ಯೋತ್ಸವ ನಡೆಯಿತು.
ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಆದಿ ಶಂಕರಚಾರ್ಯರ ಜಯಂತಿ ಅಂಗವಾಗಿ ಉತ್ಸವ ಮೆರವಣಿಗೆ ನಡೆಸಲಾಯಿತು.