ಭದ್ರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಜೆಡಿಎಸ್ ಪಕ್ಷಕ್ಕೆ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಹಾಗು ಸಮುದಾಯಗಳ ಮುಖಂಡರು ಸೇರ್ಪಡೆಗೊಳ್ಳುತ್ತಿದ್ದು, ಶನಿವಾರ ಕ್ರೈಸ್ತ ಸಮುದಾಯದ ಕೆಲವು ಮುಖಂಡರು ಸೇರ್ಪಡೆಗೊಂಡರು.
ಭದ್ರಾವತಿ, ಫೆ. ೧೮ : ಕಳೆದ ಕೆಲವು ದಿನಗಳಿಂದ ಜೆಡಿಎಸ್ ಪಕ್ಷಕ್ಕೆ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಹಾಗು ಸಮುದಾಯಗಳ ಮುಖಂಡರು ಸೇರ್ಪಡೆಗೊಳ್ಳುತ್ತಿದ್ದು, ಶನಿವಾರ ಕ್ರೈಸ್ತ ಸಮುದಾಯದ ಕೆಲವು ಮುಖಂಡರು ಸೇರ್ಪಡೆಗೊಂಡರು.
ಪಕ್ಷದ ರಾಜ್ಯ ವಕ್ತಾರ ಅಮೋಸ್ ನೇತೃತ್ವದಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತ ಸಮುದಾಯದ ಮುಖಂಡ ಗಾಬ್ರೇಲ್, ಆಂಜನೇಯ ಅಗ್ರಹಾರದ ಪ್ರಭಾಕರ್, ವೇಲೂರ್‌ಶೆಡ್ ಕುಮಾರ್, ಮೂಲೆಕಟ್ಟೆ ಶೇಖರ್, ಗಣೇಶ್ ಕಾಲೋನಿ ಕೃಷ್ಣ, ಕಾಗದ ನಗರದ ಪ್ರಸನ್ನಬಾಬು, ಕೂಲಿಬ್ಲಾಕ್ ಶೆಡ್ ಆನಂದ್ ಸೇರಿದಂತೆ ಇನ್ನಿತರರು ಸೇರ್ಪಡೆಗೊಂಡರು.
ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ, ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ, ಮಹಿಳಾ ಘಟಕದ ಭಾಗ್ಯಮ್ಮ, ನಗರಸಭೆ ಮಾಜಿ ಸದಸ್ಯ ಆನಂದ್, ಲೋಕೇಶ್ವರ್‌ರಾವ್, ಸೈಯದ್ ಅಜ್ಮಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದ ಮುಖಂಡರಾದ ಮಸ್ತಾನ್, ರೇಷ್ಮಬಾನು, ಜಾವೇದ್ ಸೇರಿದಂತೆ ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.