Sunday, July 2, 2023

ಪ್ರೊ. ಬಿ. ಕೃಷ್ಣಪ್ಪ ದಲಿತರ ಬಾಳಿನ ಆಶಾಕಿರಣ : ಸತ್ಯ ಭದ್ರಾವತಿ

ಭದ್ರಾವತಿ ನ್ಯೂಟೌನ್‌ ಜೆಟಿಎಸ್ಶಾಲೆ ಸಮೀಪದ ಲಯನ್ಸ್ಕಣ್ಣಿನ ಆಸ್ಪತ್ರೆ ಸಭಾ ಭವನದಲ್ಲಿ ಭಾನುವಾರ  ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊಬಿಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಉದ್ಘಾಟಿಸಿದರು


ಭದ್ರಾವತಿ, ಜು. :  ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತ ಚಳುವಳಿಗಳ ರೂವಾರಿಯಾಗಿದ್ದು, ಅಲ್ಲದೆ ದಲಿತರ ಬಾಳಿನ ಆಶಾ ಕಿರಣವಾಗಿದ್ದರು. ಅವರು ರೂಪಿಸಿಕೊಟ್ಟಿರುವ ಹೋರಾಟದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.

          ಅವರು ಭಾನುವಾರ ನ್ಯೂಟೌನ್ಜೆಟಿಎಸ್ಶಾಲೆ ಸಮೀಪದ ಲಯನ್ಸ್ಕಣ್ಣಿನ ಆಸ್ಪತ್ರೆ ಸಭಾ ಭವನದಲ್ಲಿ  ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

          ವಿಶ್ವಜ್ಞಾನಿ, ಭಾರತರತ್ನ ಬಾಬಾ ಸಾಹೇಬ್ಅಂಬೇಡ್ಕರ್ರವರ ದಾರಿಯಲ್ಲಿ ಸಾಗಿಬಂದ ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ೧೯೭೫ರ ಅವಧಿಯಲ್ಲಿ ದಲಿತ ಸಂಘಟನೆ ಮೂಲಕ ಚಳುವಳಿಗಳನ್ನು ಆರಂಭಿಸಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಹಲವಾರು ಪ್ರಮುಖ ಹೋರಾಟಗಳಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಮುಂಚೂಣಿ ನಾಯಾಕರಾಗಿದ್ದರು. ಅವರ ಹೋರಾಟ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ದಾರಿಯಲ್ಲಿ ನಾವುಗಳು ಸಹ ಸಾಗಬೇಕಾಗಿದೆ ಎಂದರು.

          ಒಕ್ಕೂಟದ ಅಧ್ಯಕ್ಷೆ ಎಸ್. ಉಮಾ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಸಿ. ಜಯಪ್ಪ ಹೆಬ್ಬಳಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿದರುಶಿವಮೊಗ್ಗ ಇತಿಹಾಸ ತಜ್ಞ, ಚಿಂತಕ ಡಾ. ಕೆ.ಜಿ ವೆಂಕಟೇಶ್ಉಪನ್ಯಾಸ ನಡೆಸಿ ಕೊಟ್ಟರು.

          ಹಿರಿಯ ರೈತ ಮುಖಂಡ  ಎಚ್.ಆರ್ಬಸವರಾಜಪ್ಪ,  ಬೆಂಗಳೂರು ಗಾಂಧಿಭವನ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ಕಾರ್ಯದರ್ಶಿ, ಮ್ಯಾನೆಜಿಂಗ್ಟ್ರಸ್ಟಿ ಇಂದಿರಾ ಪ್ರೊ. ಕೃಷ್ಣಪ್ಪಹಿರಿಯ ಸಾಹಿತಿ ಜಿ.ವಿ ಸಂಗಮೇಶ್ವರ್, ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ, ನಗರಸಭೆ ಪ್ರಭಾರ ಅಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ,  ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,  ಪೌರಾಯುಕ್ತ ಎಚ್.ಎಂ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ .ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ, ಒಕ್ಕೂಟದ ಪ್ರಭಾರ ಜಿಲ್ಲಾಧ್ಯಕ್ಷ ಸಿ.ಕೆ ಗಂಗಾಧರಮೂರ್ತಿ, ಡಿಎಸ್ಎಸ್ಜಿಲ್ಲಾ ಸಂಚಾಲಕ ಚಿನ್ನಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವರ್ಷ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ  ರಂಗನಾಥ್ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

          ಒಕ್ಕೂಟದ ಉಪಾಧ್ಯಕ್ಷ ಲೋಕೇಶ್(ಮೆಸ್ಕಾಂ) ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ. ಈಶ್ವರಪ್ಪ(ನಗರಸಭೆ) ನಿರೂಪಿಸಿದರು. ಒಕ್ಕೂಟದ ಮಾರ್ಗದರ್ಶಕ ಕೆ.ಬಿ ಜುಂಜಾನಾಯ್ಕ್, ಸಂಘಟನಾ ಕಾರ್ಯದರ್ಶಿ ಕೆ. ರಂಗನಾಥ್ಹಾಗು ವಿವಿಧ ಸಂಘಟನೆಗಳ ಪ್ರಮುಖರು, ದಲಿತ ನೌಕರರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Saturday, July 1, 2023

ವಿಇಎಸ್‌ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ವೈದ್ಯರು, ಹಳೇಯ ವಿದ್ಯಾರ್ಥಿಗಳಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ  ಭದ್ರಾವತಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ  ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ  ಪ್ರತಿವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ  ವಿಶೇಷವಾಗಿ ಆಚರಿಸಲಾಯಿತು. ವೈದ್ಯರು, ಹಳೇಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

    ಭದ್ರಾವತಿ, ಜು. ೧ :  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ  ನಗರದ ಹೊಸಸೇತುವೆ ರಸ್ತೆಯಲ್ಲಿರುವ  ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ  ಪ್ರತಿವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ  ವಿಶೇಷವಾಗಿ ಆಚರಿಸಲಾಯಿತು.

    ವಿದ್ಯಾಸಂಸ್ಥೆ ಸಂಸ್ಥಾಪಕರು, ಕಾರ್ಯಾಧ್ಯಕ್ಷರಾದ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.    ಆಡಳಿತ ಅಧಿಕಾರಿ ಡಾ. ಎಸ್.‌ಪಿ ರಾಕೇಶ್  ಅಧ್ಯಕ್ಷತೆ ವಹಿಸಿದ್ದರು. 

    ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ವೈದ್ಯರಾದ  ಜನರಲ್ ಫಿಸಿಷಿಯನ್, ರೇಣುಕಾ ಕ್ಲಿನಿಕ್  ಡಾ. ರಕ್ಷಿತ್,    ಕೀಲು ಮೂಳೆ ತಜ್ಞರು, ಆರಾಧ್ಯ ಆರ್ಥ್ತೋಕೇರ್  ಡಾ. ಅರುಣ್ ಜಿ. ಎಸ್,  ಮಕ್ಕಳ ರೋಗ ತಜ್ಞರು, ಇಎಸ್ಐಸಿ ಆಸ್ಪತ್ರೆ,  ಬೆಂಗಳೂರು ಡಾ.  ರೂಪ ಬಿ.ಎಂ,   ಓಎಎಂಎಫ್‌ಎಸ್‌ ಸರ್ಜನ್, ಬೆಂಗಳೂರು ಡಾ. ಯಶವಂತ್ .ಎ ಹಾಗು  ಮಕ್ಕಳ ರೋಗ ತಜ್ಞರು, ಸರ್ಕಾರಿ ಆಸ್ಪತ್ರೆ, ಆನಂದಪುರಂ, ಸಾಗರ  ಡಾ. ಕಾಂತೇಶ್. ಜೆ. ಕುಮಾರ್ ಅವರನ್ನು ಸನ್ಮಾಸಿ ಗೌರವಿಸಲಾಯಿತು.

  ವಿದ್ಯಾ ಸಂಸ್ಥೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ  ವಯೋನಿವೃತ್ತಿ ಹೊಂದಿದ ಡಿ. ಸುರೇಖಾ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

       ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ವಿದ್ಯಾಸಂಸ್ಥೆಯ ದೈಹಿಕ ನಿರ್ದೇಶಕ  ಶಿವಲಿಂಗೇಗೌಡ ನಿರೂಪಿಸಿದರು.  ಶಿಕ್ಷಕರುಗಳಾದ  ಆಶಾ ಪ್ರಾರ್ಥಿಸಿ, ಆರ್. ರವಿ  ಸ್ವಾಗತಿಸಿದರು,  ರೇವತಿ  ವಂದಿಸಿದರು.

ಹೊಸಮನೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭದ್ರಾವತಿ ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳುದೇಹದಾರ್ಢ್ಯ ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಭದ್ರಾವತಿ, ಜು. : ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದೇಹದಾರ್ಢ್ಯ ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

      ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು. 26 ಮತ್ತು 27 ರಂದು ಜರುಗಿದ    ಕುವೆಂಪು ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ದೇಹದಾರ್ಢ್ಯ ಮತ್ತು ಭಾರ ಎತ್ತುವ ಸ್ಪರ್ಧೆಯಲ್ಲಿ ಕಾಲೇಜಿನ  ದ್ವಿತೀಯ ಬಿ ಎವಿದ್ಯಾರ್ಥಿಗಳಾದ ಡಿ. ಸಂಜಯ್   ಚಿನ್ನದ ಪದಕ ಮತ್ತು ಆಸಿಫ್ ಭಾಷಾ ಬೆಳ್ಳಿ ಪದಕ ಹಾಗು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಯು. ಕಿರಣ್  ಚಿನ್ನದ ಪದಕ,  ತೃತೀಯ ಬಿ.ಕಾಂ ವಿದ್ಯಾರ್ಥಿನಿಯರಾದ ಎಸ್. ಅನುಷಾ   ಚಿನ್ನದ ಪದಕ ಮತ್ತು ಎಸ್. ಕೃತಿಕಾ ಹಾಗು ದ್ವಿತೀಯ ಬಿ. ವಿದ್ಯಾರ್ಥಿನಿ ಜೆ. ಕೀರ್ತನ ಬೆಳ್ಳಿ ಪದಕ   ತಮ್ಮದಾಗಿಸಿಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

            ವಿಜೇತ ವಿದ್ಯಾರ್ಥಿಗಳನ್ನು  ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್,  ಪ್ರಾಂಶುಪಾಲ ಡಾ. ಮಂಜುನಾಥ ಸಕಲೇಶ್, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್  ಮತ್ತು ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು  ಅಭಿನಂದಿಸಿದ್ದಾರೆ.

 

ಜನಪದ ಸಾಹಿತ್ಯ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ : ಬಿ. ಸಿದ್ದಬಸಪ್ಪ

ಭದ್ರಾವತಿಹಳೇನಗರದ ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಕರ್ನಾಟಕ ಜಾನಪದ ಪರಿಷತ್ತಾಲೂಕು ಶಾಖೆ  ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ದಿನಗಳ ಜಾನಪದ ಗೀತೆಗಳ ಕಲಿಕಾ ಶಿಬಿರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿಸಿದ್ದಬಸಪ್ಪ ಉದ್ಘಾಟಿಸಿದರು

  ಭದ್ರಾವತಿ, ಜು. : ಜನಪದ ಸಾಹಿತ್ಯ ಎಂಬುದು ಹೊಸದಾಗಿ ಯಾರಿಂದಲೂ ಸೃಷ್ಟಿಯಾಗಿಲ್ಲ. ಜನರಿಂದ ಜನರಿಗೆ ಹರಿದು ಬಂದಿರುವ ಸಾಹಿತ್ಯ ಇದಾಗಿದೆ. ಇಂತಹ ಸಾಹಿತ್ಯವನ್ನು ಇಂದಿನವರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

  ಅವರು ಶನಿವಾರ ಹಳೇನಗರದ ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಕರ್ನಾಟಕ ಜಾನಪದ ಪರಿಷತ್ತಾಲೂಕು ಶಾಖೆ  ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಿನಗಳ ಜಾನಪದ ಗೀತೆಗಳ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

   ನಮ್ಮ ದಿನನಿತ್ಯದ ಬದುಕಿನ ಚಟುವಟಿಕೆಗಳು ಸಾಹಿತ್ಯ ರೂಪವಾಗಿ  ಹರಿದು ಬಂದಿವೆ. ಜನರಿಂದ ಜನರಿಗೆ ಹರಿದು ಬಂದಿರುವ ಸಾಹಿತ್ಯ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

  ಭದ್ರಾವತಿ ನಗರ ಸಾಂಸ್ಕೃತಿಕ ವೈಭವ ಮರಳಿ ಪಡೆಯುವಂತಾಗಬೇಕುಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುವಂತಾಬೇಕು. ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಜಾನಪದ ಪರಿಷತ್ಹಾಗು ಮಹಿಳಾ ಸೇವಾ ಸಮಾಜಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

      ರಂಗಕಲಾವಿದರು ಭದ್ರಾವತಿ ಅಧ್ಯಕ್ಷ ಬಿ. ಕಮಲಾಕರ್, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ರಂಗಕಲಾವಿದರಾದ ವೈಕೆ ಹನುಮಂತಯ್ಯ, ಶಿವರಾಜ್, ಮೋಹನ್, ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

      ಕರ್ನಾಟಕ ಜಾನಪದ ಪರಿಷತ್‌ತಾಲೂಕು ಅಧ್ಯಕ್ಷ ಎಂ.ಆರ್‌ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್‌ಸದಸ್ಯ ದಿವಾಕರ್‌ಸ್ವಾಗತಿಸಿದರು. ಪ್ರಿಯಾಂಕ ಮತ್ತು ಸಂಗಡಿಗರು ಪ್ರಾರ್ಥಿಸಿದರು.   ಚಂದ್ರಶೇಖರಪ್ಪ ಚಕ್ರಸಾಲಿ ಆಶಯ ನುಡಿಗಳನ್ನಾಡಿ ಕಾ‍ರ್ಯಕ್ರಮ ನಿರೂಪಿಸಿದರು.

     ಮಹಿಳಾ ಸೇವಾ ಸಮಾಜದ ಪ್ರಮುಖರಾದ ಜಯಂತಿ ನಾಗರಾಜ್‌ಶೇಟ್‌, ಶೋಭಾ ಗಂಗಾರಾಜ್‌, ತಮಟೆ ಜಗದೀಶ್‌, ರವಿಕುಮಾರ್‌ಹಾಗು ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.