Saturday, July 1, 2023

ವಿಇಎಸ್‌ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ವೈದ್ಯರು, ಹಳೇಯ ವಿದ್ಯಾರ್ಥಿಗಳಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ  ಭದ್ರಾವತಿ ನಗರದ ಹೊಸಸೇತುವೆ ರಸ್ತೆಯಲ್ಲಿರುವ  ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ  ಪ್ರತಿವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ  ವಿಶೇಷವಾಗಿ ಆಚರಿಸಲಾಯಿತು. ವೈದ್ಯರು, ಹಳೇಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

    ಭದ್ರಾವತಿ, ಜು. ೧ :  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ  ನಗರದ ಹೊಸಸೇತುವೆ ರಸ್ತೆಯಲ್ಲಿರುವ  ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ  ಪ್ರತಿವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ  ವಿಶೇಷವಾಗಿ ಆಚರಿಸಲಾಯಿತು.

    ವಿದ್ಯಾಸಂಸ್ಥೆ ಸಂಸ್ಥಾಪಕರು, ಕಾರ್ಯಾಧ್ಯಕ್ಷರಾದ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.    ಆಡಳಿತ ಅಧಿಕಾರಿ ಡಾ. ಎಸ್.‌ಪಿ ರಾಕೇಶ್  ಅಧ್ಯಕ್ಷತೆ ವಹಿಸಿದ್ದರು. 

    ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ವೈದ್ಯರಾದ  ಜನರಲ್ ಫಿಸಿಷಿಯನ್, ರೇಣುಕಾ ಕ್ಲಿನಿಕ್  ಡಾ. ರಕ್ಷಿತ್,    ಕೀಲು ಮೂಳೆ ತಜ್ಞರು, ಆರಾಧ್ಯ ಆರ್ಥ್ತೋಕೇರ್  ಡಾ. ಅರುಣ್ ಜಿ. ಎಸ್,  ಮಕ್ಕಳ ರೋಗ ತಜ್ಞರು, ಇಎಸ್ಐಸಿ ಆಸ್ಪತ್ರೆ,  ಬೆಂಗಳೂರು ಡಾ.  ರೂಪ ಬಿ.ಎಂ,   ಓಎಎಂಎಫ್‌ಎಸ್‌ ಸರ್ಜನ್, ಬೆಂಗಳೂರು ಡಾ. ಯಶವಂತ್ .ಎ ಹಾಗು  ಮಕ್ಕಳ ರೋಗ ತಜ್ಞರು, ಸರ್ಕಾರಿ ಆಸ್ಪತ್ರೆ, ಆನಂದಪುರಂ, ಸಾಗರ  ಡಾ. ಕಾಂತೇಶ್. ಜೆ. ಕುಮಾರ್ ಅವರನ್ನು ಸನ್ಮಾಸಿ ಗೌರವಿಸಲಾಯಿತು.

  ವಿದ್ಯಾ ಸಂಸ್ಥೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ  ವಯೋನಿವೃತ್ತಿ ಹೊಂದಿದ ಡಿ. ಸುರೇಖಾ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

       ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ವಿದ್ಯಾಸಂಸ್ಥೆಯ ದೈಹಿಕ ನಿರ್ದೇಶಕ  ಶಿವಲಿಂಗೇಗೌಡ ನಿರೂಪಿಸಿದರು.  ಶಿಕ್ಷಕರುಗಳಾದ  ಆಶಾ ಪ್ರಾರ್ಥಿಸಿ, ಆರ್. ರವಿ  ಸ್ವಾಗತಿಸಿದರು,  ರೇವತಿ  ವಂದಿಸಿದರು.

No comments:

Post a Comment