Saturday, July 1, 2023

ಭದ್ರಾವತಿ ಲಯನ್ಸ್ ಕ್ಲಬ್‌‌ಜಿಲ್ಲೆಯಲ್ಲಿಯೇ ಮಾದರಿ

ಉತ್ತಮ ನಾಯಕರ ಕೊಡುಗೆ,  ಅನನ್ಯಸೇವೆ ಎನ್‌.ಎಂ ಹೆಗ್ಡೆ

ಭದ್ರಾವತಿ ಲಯನ್ಸ್ ಕ್ಲಬ್ ೨೦೨೩-೨೪ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ  ಸಮಾರಂಭದಲ್ಲಿ ಮಾಜಿ ಜಿಲ್ಲಾ ರಾಜ್ಯಪಾಲ‌ಎನ್.ಎಂ ಹೆಗ್ಡೆ ಪ್ರಮಾಣವಚನ ಬೋಧಿಸಿದರು ಬಿ.ಎಸ್‌ರಾಜೇಶ್‌ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.

    ಭದ್ರಾವತಿ, ಜು. :  ನಗರದ ಲಯನ್ಸ್ ಸಂಸ್ಥೆ ಕಳೆದ ಸುಮಾರು ೫೭ ವರ್ಷಗಳಿಂದ  ಸಾಮಾಜಿಕ ಸೇವಾ ಕಾರ್ಯಗಳನ್ನು ನಿಸ್ವಾರ್ಥವಾಗಿ ಕೈಗೊಳ್ಳುವ  ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದು ಮಾಜಿ ಜಿಲ್ಲಾ ರಾಜ್ಯಪಾಲ‌ಎನ್.ಎಂ ಹೆಗ್ಡೆ ಹೇಳಿದರು.

          ಅವರು ನಗರದ ಲಯನ್ಸ್ ಕ್ಲಬ್ ೨೦೨೩-೨೪ ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಪ್ರಮಾಣವಚನ ಬೋಧಿಸಿ ಮಾತನಾಡಿದರು.

           ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಲಯನ್ಸ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ.  ಇಲ್ಲಿನ ಕ್ಲಬ್‌ಜಿಲ್ಲೆಗೆ ಉತ್ತಮ ನಾಯಕರುಗಳನ್ನು ನೀಡಿದ ಹೆಗ್ಗಳಿಕೆಗೆ  ಪಾತ್ರವಾಗಿದೆ.  ರಾಜ್ಯಪಾಲರು, ವಲಯಾಧ್ಯಕ್ಷರು ಸೇರಿದಂತೆ  ಹಲವು ಸ್ಥಾನಮಾನಗಳಲ್ಲಿ ಸಮರ್ಥ ವ್ಯಕ್ತಿಗಳು ಅಧಿಕಾರ ಹೊಂದುವ ಮೂಲಕ ಲಯನ್ಸ್ ಸಂಸ್ಥೆಯನ್ನು ಧೃಢವಾಗಿ ಸಂಘಟಿಸಿ ಬಲಪಡಿಸುತ್ತಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

  ಶಿವಮೊಗ್ಗ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಸುಖೇಶ್‌ಮಾತನಾಡಿಭಾರತ ದೇಶ ಜಗತ್ತಿಗೆ ಕೊಡುವುದನ್ನು ಕಲಿಸಿದೆ ಹೊರತು ಬೇಡುವುದನ್ನು ಕಲಿಸಿಲ್ಲ. ಇದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಅಂದಿನಿಂದ ಇಂದಿನವರೆಗೆ ಹಲವಾರು ದೇಶಗಳ ಸಂಕಷ್ಟಗಳಿಗೆ ಭಾರತ ದೇಶ ನೆರವಾಗಿದೆ. ಇದಕ್ಕೆ ಇಂದಿನ ಜ್ವಲಂತ ಉದಾಹರಣೆ ಎಂದರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ವಿದೇಶಗಳಿಗೆ ಆರ್ಥಿಕ, ಸಾಮಾಜಿಕ, ಔಷಧಿಯ ನೆರವನ್ನು ನೀಡಿರುವುದನ್ನು ಸ್ಮರಿಸಿ ಉದಾಹರಿಸಿದರು.

   ಸಮಾಜದಲ್ಲಿ ಯಾರು ಇತರರಿಗೋಸ್ಕರವಾಗಿ ಬದುಕುತ್ತಾರೋ ಅವರುಗಳು ನೈಜವಾಗಿ ಬದುಕ್ಕಿದ್ದಂತೆ, ಇಲ್ಲದಿದ್ದರೆ ಅವರುಗಳು ಬದುಕ್ಕಿದ್ದು ಸತ್ತಂತೆ. ಇದಕ್ಕೆ ಲಯನ್ಸ್ ಸದಸ್ಯರುಗಳು ಸಾಕ್ಷಿ. ಅವರುಗಳು ತಮ್ಮ ಬದುಕಿನ ಜೊತೆಗೆ ಇತರರ  ಬದುಕಿನ ಸಂಕಷ್ಟ್ಟಗಳಿಗೆ ನಿರಂತರವಾಗಿ ಸ್ಪಂದಿಸುವ ಮೂಲಕ ಮಾನವೀಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಮಾಜಿಕ ಬದ್ದತೆ, ಸಾಮಾಜಿಕ ಕಳಕಳಿ ಹೊಂದಿರುವವರು ಮಾತ್ರ ಸಾಮಾಜಿಕ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದರು.

   ರವಿರಾಜ್ ನಾಯ್ಕ್, ದೇವರಾಜ್, ಚಂದ್ರಶೇಖರ್, ರಮೇಶ್, ಜಿ.ಪಿ ದರ್ಶನ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ನಗರದ ರೈಲ್ವೆ ನಿಲ್ದಾಣ  ಮುಂಭಾಗ ಸುಮಾರು ೩.೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಂಬದ ಗಡಿಯಾರ (ಟವರ್ ಕ್ಲಾಕ್)  ದಾನಿ ಹಾಗು ಕ್ಲಬ್ ವಿವಿಧ ಸೇವಾ ಚಟುವಟಿಕೆಗಳಿಗೆ ಆರ್ಥಿಕ ಧನ ಸಹಾಯ ಮಾಡಿದ ದಾನಿಗಳು ಹಾಗು ಗಣ್ಯರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

          ದಿವಂಗತ ಕೆ.ಸಿ ವೀರಭದ್ರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ  ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕುಂದಾಪುರ ಆತ್ರಾಡಿ ಚನ್ನಕೇಶವ ಲಯನ್ಸ್ ಕ್ಲಬ್  ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ, ಚಾಂಪಿಯನ್ ಟ್ರೋಫಿ ಹಾಗು ನಗರದ ಲಯನ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆದಿದ್ದುಬಹುಮಾನಗಳನ್ನು ವಿತರಿಸಲಾಯಿತು.

    ೨೦೨೩-೨೪ ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಬಿ.ಎಸ್‌ರಾಜೇಶ್‌, ಕಾರ್ಯದರ್ಶಿಯಾಗಿ ಎಂ. ದಿವಾಕರ್‌ಮತ್ತು ಖಜಾಂಚಿಯಾಗಿ ಎನ್.‌ ಶ್ರೀನಿವಾಸ್‌, ಲಿಯೋ ಕ್ಲಬ್‌ಅಧ್ಯಕ್ಷರಾಗಿ ಆರ್.‌ ಪ್ರೇಕ್ಷಾ, ಕಾರ್ಯದರ್ಶಿಯಾಗಿ ಎಸ್.‌ ವರ್ಷ ಮತ್ತು ಖಜಾಂಚಿಯಾಗಿ ಎನ್.ಎಚ್‌ನಿಧಿ ಕೇಶವ ಪದಗ್ರಹಣ ಸ್ವೀಕರಿಸಿದರು.

          ನಿಖಿತಾ ಪ್ರಾರ್ಥಿಸಿ, ಎ.ಎನ್  ಕಾರ್ತೀಕ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಾಗರಾಜ ಶೇಟ್ ಅತಿಥಿಗಳ ಪರಿಚಯ ಮಾಡಿದರು. ಎಸ್.ಜಿ.ಶಂಕರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ವಂದಿಸಿದರು.

No comments:

Post a Comment