ಆಡಳಿತ ಮಂಡಳಿ ಮನವಿಗೆ ಸ್ಪಂದಿಸಿದ ಸರ್ಕಾರ
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಗೆ ಮೇ.೧೫ರೊಳಗೆ ೧೪.೨೯ ಕೋ.ರು ಸಾಲ ಮಂಜೂರಾತಿ ಮಾಡುವಂತೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವಿಶೇಷ ಕಾರ್ಯದರ್ಶಿ ಸಂಬಂಧಪಟ್ಟ ಇಲಾಖೆಯ ಉಪ ನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿ ಏ.೧೩ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮೇ.೧೫ ರಿಂದ ಜೂ.೨೦ರ ವರೆಗಿನ ಲೆಕ್ಕಚಾರದಂತೆ ವೇತನ ಬಾಕಿ, ನಿರ್ವಹಣಾ ವೆಚ್ಚ ೨೬೦೮ ಲಕ್ಷ ರು. ಅಂದಾಜಿಸಲಾಗಿದೆ. ಪ್ರಸ್ತುತ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ತೀರ ಸಂಕಷ್ಟಕ್ಕೆ ಒಳಗಾಗಿದ್ದು, ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿತ್ತು.
ಮನವಿಗೆ ಸ್ಪಂದಿಸಿರುವ ಸರ್ಕಾರ ೧೪೨೯ ಲಕ್ಷ ರು. ಸಾಲ ಮಂಜೂರಾತಿ ಮಾಡುವಂತೆ ಸಂಬಂಧ ಇಲಾಖೆಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವಿಶೇಷ ಕಾರ್ಯದರ್ಶಿ ಎನ್.ಆರ್ ಜಗನ್‌ಮಾತರವರು ಖನಿಜ ಭವನದ ಉಪ ನಿರ್ದೇಶಕರಿಗೆ ಸಾಲ ಮಂಜೂರಾತಿಗೆ ಸೂಚಿಸಿದ್ದಾರೆ.
No comments:
Post a Comment