ಭದ್ರಾವತಿ ತಾಲೂಕು ಆಡಳಿತ ತಕ್ಷಣ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ ಭಾರತರತ್ನ ಸರ್. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಏ. ೩೦: ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಹಾಗೂ ಜಾನುವಾರುಗಳಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ತಾಲೂಕು ಆಡಳಿತ ತಕ್ಷಣ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ ಭಾರತರತ್ನ ಸರ್. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ನಗರಸಭೆ ಪೌರಾಯುಕ್ತ ಮನೋಹರ್ ಹೆಚ್ಚಿನ ಆಸಕ್ತಿ ವಹಿಸಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ನಗರಸಭೆ ವ್ಯಾಪ್ತಿಯಲ್ಲಿನ ಸರ್ವೆ ನಂ. ೩೨ರ ಕಡದಕಟ್ಟೆಯ ಸುಮಾರು ೧ ಎಕರೆ ೩೫ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ. ೧೬ ಹೆಬ್ಬಂಡಿ ಗ್ರಾಮದ ಸುಮಾರು ೮ ಎಕೆರೆ ೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೧೭ ಹೆಬ್ಬಂಡಿ ಗ್ರಾಮದ ಸುಮಾರು ೨೮ ಗುಂಟೆ ವಿಸ್ತೀಣವುಳ್ಳ ಕೆರೆ, ಸರ್ವೆ ನಂ. ೨೬ ಕವಲಗುಂದಿ ಗ್ರಾಮದ ಸುಮಾರು ೮ ಎಕರೆ ೩೮ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೯೦ ಜನ್ನಾಪುರ ೬ ಎಕರೆ ೧೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೪೮ ಹುತ್ತಾದಲ್ಲಿರುವ ಸುಮಾರು ೮ ಎಕರೆ ೩೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೨೮ ಹುತ್ತಾದಲ್ಲಿರುವ ಸುಮಾರು ೨ ಎಕರೆ ೨೯ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೧ ಬೊಮ್ಮನಕಟ್ಟೆಯಲ್ಲಿರುವ ಸುಮಾರು ೧ ಎಕರೆ ೧೮ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೬ರ ೧ ಎಕರೆ ೧೨ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೫೭ರ ಸೀಗೆಬಾಗಿ ಗ್ರಾಮದ ಸುಮಾರು ೫ ಎಕರೆ ೧ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೮ರ ಸುಮಾರು ೨ ಎಕರೆ ೨ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೭ರ ಕಣಕಟ್ಟೆ ಸುಮಾರು ೫ ಎಕರೆ ೨೫ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೩ರ ಕಣಕಟ್ಟೆ ಗ್ರಾಮದ ಸುಮಾರು ೨ ಎಕರೆ ೨೯ ಗುಂಟೆ ಹಾಗೂ ಸರ್ವೆ ನಂ.೩ರ ಕಬಳಿಕಟ್ಟೆ ಗ್ರಾಮದ ಸುಮಾರು ೩ ಎಕರೆ ೨೫ ಗುಂಟೆ ವಿಸ್ತೀರ್ಣವುಳ್ಳ ಕೆರೆಗಳ ಬೌಂಡರಿ ನಿಗದಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂತಿಮ ಕೊಳಚೆ ಪ್ರದೇಶ ಘೋಷಣೆ : ಕೃತಜ್ಞತೆ
ನಗರಸಭೆ ವಾರ್ಡ್ ನಂ. ೨೮ರ ಹಾಲಪ್ಪ ಕಾಲೋನಿ ಪ್ರದೇಶವನ್ನು ಅಂತಿಮ ಕೊಳಚೆ ಪ್ರದೇಶವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಈ ಹಿಂದೆ ಹೊರಡಿಸಿದ್ದ ಪ್ರಿಲಿಮಿನರಿ ನೋಟಿಫಿಕೇಷನ್ ರದ್ದುಗೊಳಿಸಿ ಅಂತಿಮ ಕೊಳಚೆ ಪ್ರದೇಶವೆಂದು ಘೋಷಿಸಿದ್ದು, ಈ ಸಂಬಂಧ ಹೊರಡಿಸಲಾಗಿರುವ ನೋಟಿಫಿಕೇಷನ್ ರಾಜ್ಯಪತ್ರದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರರಿಗೆ ಆದೇಶಿಸಿದ್ದಾರೆ.
ಅಂತಿಮ ಕೊಳಚೆ ಪ್ರದೇಶ ಘೋಷಣೆಗೆ ಕಾರಣಕರ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರಿಗೆ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ್ಮನ್ ಆರ್. ವೇಣುಗೋಪಾಲ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವನಾಥರಾವ್ ಗಾಯಕ್ವಾಡ್, ಆರ್. ಮುಕುಂದಯ್ಯ, ರಮಾ ವೆಂಕಟೇಶ್, ಅಂತೋಣಿ ಗ್ಸೇವಿಯರ್, ವಿ ಪ್ರತಾಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:
Post a Comment