ತಹಸೀಲ್ದಾರ್ ಸೋಮಶೇಖರ್
ಭದ್ರಾವತಿ: ಸುಮಾರು ೧ ವರ್ಷದಿಂದ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಸೋಮಶೇಖರ್ ಗುರುವಾರ ನಿವೃತ್ತಿ ಹೊಂದಲಿದ್ದಾರೆ.
ಈ ಹಿಂದೆ ದಂಡಾಧಿಕಾರಿಯಾಗಿ ಸುಮಾರು ಎರಡೂವರೆ ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಅಂದಿನ ತಹಸೀಲ್ದಾರ್ ಎಂ.ಆರ್ ನಾಗರಾಜ್‌ರವರ ಸ್ಥಾನಕ್ಕೆ ಸೋಮಶೇಖರ್‌ರವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಫೆ.೧೮, ೨೦೧೯ರಂದು ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಚನ್ನರಾಯಪಟ್ಟಣದಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ವೃತ್ತಿ ಸೇವಾವಧಿಯ ಕೊನೆ ಅವಧಿಯನ್ನು ಇಲ್ಲಿ ಕಳೆದಿದ್ದು, ಯಾವುದೇ ಆರೋಪಗಳಿಗೆ ಗುರಿಯಾಗದೆ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು.

No comments:
Post a Comment