ಗುರುವಾರ, ಏಪ್ರಿಲ್ 30, 2020

ಮೇ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ: ನಗರದ ಮೆಸ್ಕಾಂ ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೇ.೨ರಂದು ಮೊದಲನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ಭದ್ರಾವತಿ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಡಚಣೆಗಳನ್ನು ಸರಿಪಡಿಸಲು ಎಂಆರ್‌ಎಸ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜನ್ನು ಬದಲಿಸಿ ಕಡೂರು-ಶಿವಮೊಗ್ಗ ೧೧೦ ಕೆವಿ ಮಾರ್ಗದಿಂದ ನೀಡಲು ಮುಂದಾಗಿರುವ ಕಾರಣ ಅಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಭದ್ರಾವತಿ ನಗರ, ಅಂತರಗಂಗೆ, ಉಬ್ರಾಣಿ, ಹಿರಿಯೂರು, ಕಾರೇಹಳ್ಳಿ, ದೊಣಮಘಟ್ಟ, ಬಾರಂದೂರು, ತಡಸ, ಬಿಳಿಕಿ, ಬೊಮ್ಮೆನಹಳ್ಳಿ, ದೊಡ್ಡೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ